ಭಾವನನ್ನ ಕೊಂದ ಭಾಮೈದ, ಅದೇ ಕೊರಗಿನಲ್ಲಿ ಅಕ್ಕ ಸೂಸೈಡ್​

ಬೆಂಗಳೂರು: ಅಕ್ಕ ಅಂತರ್ಜಾತಿ ವಿವಾಹವಾದಳು ಎಂಬ ಕಾರಣಕ್ಕೆ ಆಕೆಯ ತಮ್ಮನೇ ಅಕ್ಕನ ಗಂಡನನ್ನ ಅಂದ್ರೆ ಭಾವನನ್ನು ಹತ್ಯೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡದಿದೆ.

ನವೆಂಬರ್​ 20 ರಂದು ನಿನ್ನ ಬಳಿ ಮಾತನಾಡಬೇಕು ಎಂದು ಹೇಳಿ ವಿನಯ್​ ತನ್ನ ಅಕ್ಕ ಮೀನಾಕ್ಷಿಯ ಪತಿ ಹರೀಶ್​ನನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆತನನ್ನ ಕೊಲೆ ಮಾಡಿದ್ದಾನೆ. ಇದರಿಂದ ತೀವ್ರ ಮನನೊಂದಿದ್ದ ಮೀನಾಕ್ಷಿ ಇಂದು ಅದೇ ಕೊರಗಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಮುಂಜಾನೆ ನನ್ನ ಸಾವಿಗೆ ಯಾರೂ ಕಾರಣರಲ್ಲ ಅಂತಾ ಡೆತ್​ ನೋಟ್​ ಬರೆದಿಟ್ಟು, ಪತಿ ಹರೀಶ್ ಕೊಡಿಸಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.