ತನಗಿಂತ ಮೊದಲೇ ತಮ್ಮನಿಗೆ ಮದುವೆ ಮಾಡ್ತಿದ್ದಾರೆಂದು ಗುಂಡು ಹಾರಿಸಿದ ಅಣ್ಣ!

ಬಿಹಾರ: ತನಗಿಂತ ಮೊದಲೇ ತಮ್ಮನಿಗೆ ಮದುವೆ ಮಾಡ್ತಿದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡು ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆ ಬಿಹಾರದ ಬೇಗುಸಾರೈ ಸಮೀಪದ ಪಹ್ಸಾರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 27 ವರ್ಷದ ನಂದ್​ಲಾಲ್ ಎಂದು ಗುರುತಿಸಲಾಗಿದೆ. ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಬಾವಾ ಲಾಲ್ ಈ ಹಿಂದೆ ಹಲವು ಕ್ರಿಮಿನಲ್​ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದನಂತೆ. ಹೀಗಾಗಿ ಯಾರೂ ಆತನಿಗೆ ಹೆಣ್ಣು ಕೊಡಲು ಮುಂದಾಗಲಿಲ್ಲ. ಕೊನೆಗೇ ಕುಟುಂಬಸ್ಥರು ಕಿರಿಯ ಮಗನಿಗೆ ಮದುವೆ ಮಾಡಲು ನಿರ್ಧರಿಸಿದ್ರು. ಇದರಿಂದ ಕೋಪಗೊಂಡ ಬಾವಾ ಲಾಲ್ ಗುಂಡುಹಾರಿಸಿ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ .

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv