ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಾಚಿಕೆಗೇಡು, ಕೊನೆಗೂ ಬಾಯ್ಬಿಟ್ಟ ಇಂಗ್ಲೆಂಡ್

ಹತ್ಯಾಕಾಂಡಕ್ಕೆ ಆದೇಶ ನೀಡಿದ್ದ ರಾಕ್ಷಸ ಜ.ಡೈಯರ್

ಇಂಗ್ಲೆಂಡ್​: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಾಚಿಕೆಗೇಡಿನ ಕೃತ್ಯ ಅಂತಾ ಇಂಗ್ಲೆಂಡ್​ ಇಂದು ಹೇಳಿದೆ. ಬ್ರಿಟನ್ ಪಾರ್ಲಿಮೆಂಟ್​​ನಲ್ಲಿ ಹತ್ಯಾಕಾಂಡವನ್ನ ಖಂಡಿಸಿರುವ ಇಂಗ್ಲೆಂಡ್​ ಪ್ರಧಾನಿ ಥೆರಸಾ ಮೇ, ಅಂದು ನಡೆದ ಘಟನೆ ಬಗ್ಗೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ಅಲ್ಲದೇ ಘಟನೆಯಿಂದ ನೋವಾಗುತ್ತಿದೆ. ಇದೊಂದು ನಾಚಿಕೆಗೇಡಿನ ಸಂಗತಿ ಅಂತಾ ಹೇಳಿದ್ದಾರೆ. ಪಂಜಾಬ್​ನ ಅಮೃತಸರದಲ್ಲಿ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ 13, 1919 ರಲ್ಲಿ ಶಾಂತಿಯಿಂದ ನಿಶ್ಯಸ್ತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದ 370ಕ್ಕೂ ಹೆಚ್ಚು ದೇಶ ಭಕ್ತರ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿಯನ್ನು ಬ್ರಿಟಿಷ್ ಸೇನೆ ನಡೆಸಿತ್ತು. ಅದ್ರಲ್ಲೂ ಜನರಲ್ ಡೈಯರ್ ಎಂಬ ರಾಕ್ಷಸನ ಆದೇಶದ ಮೇಲೆ ನಡೆಸಲಾಗಿದ್ದ ಗುಂಡಿನ ದಾಳಿಯಲ್ಲಿ ಮಕ್ಕಳು-ಮರಿಗಳು ಸೇರಿ 370ಕ್ಕೂ ಹೆಚ್ಚು ದೇಶಭಕ್ತರನ್ನು ಹತ್ಯೆಗೈಯಲಾಗಿತ್ತು. ಈ ಘಟನೆ ನಡೆದು ಇನ್ನೇನು ಇದೇ ಏಪ್ರಿಲ್ 13ಕ್ಕೆ 100 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಈಗಲಾದರೂ ಇಂಗ್ಲೆಂಡ್​​​​​ನ ಬ್ರಿಟಿಶ್ ಸರ್ಕಾರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಬೇಷರತ್ ಕ್ಷಮೆ ಯಾಚಿಸಬೇಕು ಅನ್ನೋ ಒತ್ತಾಯ ತೀವ್ರವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಇಂಗ್ಲೆಂಡ್ ಪ್ರಧಾನಿ ಥೆರೇಸಾ ಮೇ, ಜಲಿಯನ್ ವಾಲಾಬಾಗ್ ಘಟನೆ ಬಗ್ಗೆ ಕ್ಷಮೆ ಕೇಳಿಲ್ಲ, ಬದಲಿಗೆ ವಿಷಾದ ವ್ಯಕ್ತಪಡಿಸಿ ಅದು ನಾಚಿಕೆಗೇಡಿನ ಘಟನೆ ಅಂತಾ ಕರೆದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv