ಬರೀ 30ಕ್ಕೇ ಹಿಂಗಾದ್ರೆ 50ಕ್ಕೇ ಇಂಗ್ಲೆಂಡ್​ ಹೆಂಗಾಗುತ್ತೆ..?

ಬಿಸಿಲಿನ ನರ್ತನಕ್ಕೆ ಬ್ರಿಟನ್ ಅಕ್ಷರಶಃ ತತ್ತರಿಸಿಹೋಗಿದೆ. 2018 ರಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ಜಳಪಿಸುತ್ತಿದ್ದು ಅಲ್ಲಿನ ಜನ ಕಂಗಾಲಾಗಿ ಹೋಗಿದ್ದಾರೆ. ಕೇವಲ ಶೇಕಡಾ 32 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಅಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಸಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನ ಬೇಗೆ ಬೆಂದು ಬಳಲುತ್ತಿರುವವ ನೆರವಿಗೆ ರಕ್ಷಣೆ ಟೀಂ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ.

ಎಲ್ಲಿ ತಂಪಿದ್ಯೋ ಅಲ್ಲಿಗೆ ಜನ್ರು..!

ಬಿಸಿಲಿನ ನರ್ತನಕ್ಕೆ ಸೋತು ಹೋಗಿರುವ ಮಂದಿ, ತಂಪು ಪ್ರದೇಶಗಳನ್ನ ಹುಡುಕಿಕೊಂಡು ಹೋಗುತ್ತಿದ್ದಾರೆ. ನೀರಿನ ಮೂಲ, ಗಿಡಮರಗಳ ಮೊರೆ ಹೋಗುತ್ತಿದ್ದಾರೆ. ಕೆಲವ್ರಂತೂ ಕಡಲ ತೀರಗಳಲ್ಲಿ ಸಮುದ್ರದ ಅಲೆಗಳ ಮೂಲಕ ಸಮಾಧನ ಮಾಡಿಕೊಳ್ಳುತ್ತಿದ್ದಾರೆ. ಹಾಗೆ ತಂಪಾದ ನೀರಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ

ರಸ್ತೆಗಳೆಲ್ಲಾ ಮೆಲ್ಟ್​..!

 

ಇನ್ನು ರಸ್ತೆಗಳಲ್ಲಂತೂ ಓಡಾಡೋದೇ ಕಷ್ಟವಾಗಿದೆ. ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿವೆ. ಕೆಲವು ರಸ್ತೆಗಳಲ್ಲಿ ಡಾಂಬರು ಮೆಲ್ಟ್ ಆಗಿದೆ. ಹೀಗಾಗಿ ವಾಹನಗಳು ಓಡಾಡೋದೆ ಕಷ್ಟವಾಗಿದೆ. ಕೆಲವು ವಾಹನಗಳ ಟೈರ್​ ಸುಟ್ಟು ಹೋಗಿವೆ. ಇನ್ನು ಕೆಲವು ವಾಹನಗಳ ಟೈರ್​ಗೆ ದಪ್ಪಗೆ ಡಾಂಬರು ಅಂಟಿಕೊಂಡು ಬಿಟ್ಟಿದೆ. ಹೀಗಾಗಿ ಸಂಚಾರ ವ್ಯವಸ್ಥೆಯಲ್ಲೂ ಅಸ್ತವ್ಯಸ್ಥ ಆಗಿದೆ. ಅಷ್ಟೇ ಅಲ್ಲ ಟ್ಯಾಪ್​ ವಾಟರ್ ಕೂಡ ಬಿಳಿ ಬಣ್ಣಕ್ಕೆ ತಿರುಗಿದ್ದು, ಕುಡಿಯಲು ಅಸಾಧ್ಯ ಅನ್ನೋ ಸ್ಥಿತಿಗೆ ತಲುಪಿವೆ.

ಕಾಡು ಪ್ರಾಣಿಗಳಿಗೂ ಆಪತ್ತು..!

ಹಾಗೆ ವನ್ಯ ಜೀವಿಗಳು ಕೂಡ ಇದ್ರಿಂದ ಹೊರತಾಗಿಲ್ಲ. ಪ್ರಾಣಿಗಳು ಸಹ ಕುಡಿಯು ನೀರಿಲ್ಲದೇ ಪರದಾಡುತ್ತಿವೆ. ಪಕ್ಷಿಗಳಂತೂ ಬಿಸಿಲಿನಿಂದ ರಕ್ಷಿಸಿಕೊಳ್ಳಲಾಗದೇ ಒದ್ದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಪಕ್ಷಿಗಳಿಗೆ ತಂಪಾದ ಆಹಾರಗಳನ್ನು ನೀಡುವ ಮೂಲಕ ಸಂತೈಸುತ್ತಿದ್ದಾರೆ.

ಹಾಗೆ ಬಿಸಿಲಿನ  ಆರ್ಭಟಕ್ಕೆ ನಿನ್ನೆಯಷ್ಟೇ 17 ವರ್ಷದ ಈಜುಪಟು ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಲ್ಫೋರ್ಡ್​ನಲ್ಲಿ ಬೆಸಿಲಿನ ಬೇಗೆಯನ್ನ ತಡೆದುಕೊಳ್ಳಲಾಗದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಒಂದೇ ಸಮನೆ ಬಿಸಿಲು ತಾಂಡವ ಆಡಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನೂ ತೀವ್ರ ಸಕೆಯ ನಡುವೆಯೂ ಕೆಲವರು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ತಿದ್ದಾರೆ.

 

 

 

 

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv