ವಿಶ್ವಕಪ್ ಬೇಟೆಗೆ ವಿರಾಟ್ ​ಕೊಹ್ಲಿ ಸೈನ್ಯ ರೆಡಿ..! ಆಲ್​ ದಿ ಬೆಸ್ಟ್ ಹೇಳಿದ ರಿಷಬ್ ಪಂತ್..!

ಕ್ರಿಕೆಟ್​​ ಜನ್ಮಸ್ಥಾನ ಇಂಗ್ಲೆಂಡ್​ನಲ್ಲಿ ನಾಳೆಯಿಂದ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ.ಈ ಮಹಾಸಂಗ್ರಾಮದಲ್ಲಿ ಗೆದ್ದು ಟ್ರೋಫಿ ಮುಡಿಗೇರಿಸಿಕೊಳ್ಳಲು,ಎಲ್ಲಾ ತಂಡಗಳು ರೆಡಿಯಾಗಿವೆ.ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಕೂಡ ಭಾರತಕ್ಕೆ ಮೂರನೇ ಬಾರಿ ವಿಶ್ವಕಪ್ ತಂದುಕೊಡಲು ರೆಡಿಯಾಗಿದೆ.ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನ ಆಡಿ, ತಮ್ಮ ಸ್ಟ್ರೆಂಥ್- ವೀಕ್ನೆಸ್​ಗಳನ್ನ ಕಂಡುಕೊಂಡಿದೆ.ಮತ್ತೊಂದೆಡೆ ಕೋಟ್ಯಾಂತರ ಫ್ಯಾನ್ಸ್,  ಟೀಂ ಇಂಡಿಯಾಗೆ ಬೆಂಬಲಿಸಲು ಉತ್ಸುಕರಾಗಿದ್ದಾರೆ.ಸೋಷಿಯಲ್ ಮೀಡಿಯಾಗಳಲ್ಲಿ ವಿರಾಟ್ ಕೊಹ್ಲಿ ಪಡೆಗೆ ಶುಭಾಷಯ ಕೋರುತ್ತಿದ್ದಾರೆ.ಬರೀ ಫ್ಯಾನ್ಸ್ ಅಷ್ಟೇ ಅಲ್ಲ, ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ರಿಷಬ್ ಪಂತ್ ಸಹ ಕೊಹ್ಲಿ ಸೈನ್ಯಕ್ಕೆ ಶುಭಕೋರಿದ್ದಾರೆ.ಈ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ರಿಷಬ್ ಪೋಸ್ಟ್ ಹಾಕಿದ್ದಾರೆ.ವಿಶ್ವಕಪ್​ನ ತವರಿಗೆ ಎತ್ತಿಕೊಂಡು ಬನ್ನಿ ಎಂದು ಬ್ಲೂ ಬಾಯ್ಸ್​ಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv