ವರುಣನ ಆರ್ಭಟಕ್ಕೆ ಕೊಚ್ಚಿ ಹೋಯ್ತು ಸೇತುವೆ..!

ಬೀದರ್: ಮುಂಗಾರು ರಾಜ್ಯಕ್ಕೆ ಕಾಲಿಡ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ಇನ್ನು ಗಡಿನಾಡು ಬೀದರ್​ನಲ್ಲಿ ಮಳೆರಾಯನ ರುದ್ರನರ್ತನಕ್ಕೆ ಅವಾಂತರಗಳೇ ಸೃಷ್ಟಿಯಾಗಿವೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಔರಾದ್ ತಾಲೂಕಿನ ನಿಡೋದಾ ಗ್ರಾಮದ ಬಳಿ ತಾತ್ಕಾಲಿಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಆದರಿಂದಾಗಿ ಮೂರು ಸಾವಿರ ಜನರಿರುವ ಈ ಗ್ರಾಮದಲ್ಲಿ ಜನರು ಹೊರ ಹೋಗಲಾಗುತ್ತಿಲ್ಲ. ಅಲ್ಲದೇ ಹೊರಗಿನವರು ಊರಿಗೆ ಬರಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲ ಅವಾಂತರಗಳು ನಡೆದರೂ ಅಧಿಕಾರಿಗಳು ಮಾತ್ರ ಪರಿಷತ್ ಚುನಾವಣೆ ಗುಂಗಿನಲ್ಲಿ ಬಿಜಿಯಾಗಿದ್ದಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.