ಪ್ರವಾಸಿಗರ ಭಾರಕ್ಕೆ ಕುಸಿದೇಬಿಡ್ತು ಬ್ರಿಡ್ಜ್..! ಆದ್ರೂ ದಾಟೋದು ನಿಲ್ಲಿಸಲಿಲ್ಲ

ಸೇತುವೆ ಮೇಲೆ ಹೋಗೋದಂದ್ರೇನೇ ಕೆಲವರಿಗೆ ಭಯ. ಇನ್ನು ಅದರ ಮೇಲೆ ನಿಂತಿದ್ದಾಗಲೇ ಆ ಸೇತುವೆ ಕುಸಿದು ಬಿದ್ದರೆ ಹೇಗಾಗಬೇಡ! ಆ ಗಾಬರಿಗೆ ಒಂದು ಕ್ಷಣ, ಏನು ಮಾಡಬೇಕು ಅನ್ನೋದೇ ತೋಚಲ್ಲ. ಆದ್ರೆ ಚೀನಾದಲ್ಲಿ ನಡೆದಿದ್ದೇ ಬೇರೆ. ಪ್ರವಾಸಿಗರ ತೂಕಕ್ಕೆ ಸೇತುವೆಯೇ ಕುಸಿದು ಬಿದ್ದರೂ, ಅವರೆಲ್ಲರೂ ಸೇತುವೆ ದಾಟೋದನ್ನ ನಿಲ್ಲಿಸಲಿಲ್ಲ.

ಇಲ್ಲಿನ ಗುವಾಂಗ್​ಡಾಂಗ್​​​ನ ಫೋರ್ಶಾನ್​ನಲ್ಲಿರೋ ಗ್ರೀನ್​ ಸ್ಯಾಂಡ್​ ಐಲ್ಯಾಂಡ್​ ಪಾರ್ಕ್​​ನಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಅಂದು ಸೇತುವೆ ಮೇಲೆ ಸಾಕಷ್ಟು ಜನರಿದ್ದ ಕಾರಣ ಸೇತುವೆ ಬೆಂಡ್​ ಆಗಿದೆ. ಡ್ರ್ಯಾಗನ್​​ ಬೋಟ್​​ ರೇಸ್​ ವೀಕ್ಷಣೆಗೆ ನೂರಾರು ಜನ ಬಂದಿದ್ದು, ಸೇತುವೆ ಮೇಲೆ ನಿಂತು ರೇಸ್​ ನೋಡುತ್ತಿದ್ದರು. ಇನ್ನು ಸೇತುವೆ ಕುಸಿದರೂ ಜನರು ಅದರ ಮೂಲಕವೇ ಹಾದು ಬಂದಿದ್ದಾರೆ. ಸದ್ಯ ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv