ಸೇತುವೆ ಮೇಲೆ ಶೇಕ್ ಡಾನ್ಸ್ ಮಾಡಬೇಡಿ, ಬಿದ್ದೋಗ್ತೀರಿ..!

ಚೀನಾ: ಕೆಲವೊಬ್ಬರಿಗೆ ಭೂಮಿ ಆಗಿರಲಿ, ನೀರೇ ಆಗಿರಲಿ, ಶೇಕ್​ ಡ್ಯಾನ್ಸ್​ ಮಾಡೋದಂದ್ರೆ ತುಂಬಾ ಇಷ್ಟ ಅನ್ನಿಸುತ್ತೆ. ಹೀಗೆ ಚೀನಾದ ಜಿಯಾಂಗ್ಸು ಸೂಯಿಂಗ್​ ಎಂಬ ಟೂರಿಸ್ಟ್​ ಸ್ಥಳದಲ್ಲಿ ಪ್ರವಾಸಿಗರು ಸೇತುವೆ ಮೇಲೆ ನಡೆದುಕೊಂಡು ಹೋಗ್ತಿರ್ತಾರೆ. ಆಗ ಬ್ರಿಡ್ಜ್​ ಮೇಲೆ ನಿಂತೇ ಇಡೀ ಸೇತುವೆ ಶೇಕ್​ ಮಾಡೋಕೆ ಮುಂದಾಗ್ತಾರೆ. ಹೀಗೆ ಸಖತ್​ ಖುಷಿಯಿಂದ ಸೇತುವೆ ಶೇಕ್​ ಮಾಡ್ತಿರುವಾಗ, ಕೆಲ ಹೊತ್ತಿನ ಬಳಿಕ ಮರದಿಂದ ನಿರ್ಮಿತವಾದ ಸೇತುವೆ​ ತುಂಡಾಗಿ ಬಿದ್ದಿದೆ. ಸೇತುವೆ ಕುಸಿಯುತ್ತಿದ್ದಂತೆ, ಅದರ ಮೇಲಿದ್ದ ಜನರೆಲ್ಲರೂ ಕೆಳಗಿದ್ದ ನೀರಿನಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, 12 ಜನರಿಗೆ ಗಾಯಗಳಾಗಿವೆ. ಸದ್ಯ ಈ ವಿಡಿಯೋ ಚೀನಾ ಸಾಮಾಜಿಕ ಜಾಲತಾಣಗಳಲ್ಲಿ​ ವೈರಲ್​ ಆಗಿದ್ದು, ಭಾರೀ ಟ್ರೋಲ್​ಗೆ ಒಳಗಾಗಿದೆ.