ವರುಣನ ಆರ್ಭಟ: ಉದ್ಘಾಟನೆಗೂ ಮುನ್ನವೇ, ಕೊಚ್ಚಿ ಹೋಯ್ತು ಬ್ರಿಡ್ಜ್​..!

ಬೆಳಗಾವಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಇನ್ನು ವರುಣನ ಅಬ್ಬರಕ್ಕೆ ಸಿಲುಕಿ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಬ್ರಿಡ್ಜ್‌ ಕಂ ಬ್ಯಾರೆಜ್ ಉದ್ಘಾಟನೆಗೂ ಮುನ್ನವೇ ಕೊಚ್ಚಿಹೋಗಿದೆ. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ- ಬೇವಿನಕೊಪ್ಪ ಗ್ರಾಮಗಳ ನಡುವೆ ನಿರ್ಮಿಸಿದ್ದ ಬ್ರಿಡ್ಜ್‌ ಕೊಚ್ಚಿಹೋಗಿದೆ.

ಸುಮಾರು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದ್ದು, 5 ತಿಂಗಳ ಹಿಂದೆಯಷ್ಟೇ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದ್ರೆ ಇನ್ನೂ ಉದ್ಘಾಟನೆ ಮಾಡಿರಲಿಲ್ಲ. ಇದೀಗ ವರುಣನ ಅಬ್ಬರಕ್ಕೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ ರಭಸಕ್ಕೆ ಆ ಸೇತುವೆ ಕೊಚ್ಚಿಹೊಗಿದೆ. ಸದ್ಯ ಸ್ಥಳೀಯರು ಕಾಮಗಾರಿ ಕಳಪೆಯಾಗಿರುವುದೇ ಈ ದುರಂತಕ್ಕೆ ಕಾರಣ ಅಂತಾ ಆರೋಪ ಮಾಡ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv