ಪಿಡಿಒ ಅಧಿಕಾರಿಗೆ ಲಂಚ ಕೊಟ್ಟರೇ ಮಾತ್ರ ವಸತಿ ಯೋಜನೆ ಮನೆ ಮಂಜೂರು..!

ದಾವಣಗೆರೆ: ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿಯ ಬಣ್ಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯತ್​ ಪಿಡಿಒ ಸಿ. ಬಸಪ್ಪ, ವಸತಿ ಯೋಜನೆ ಫಲಾನುಭವಿಗಳನ್ನು ಮನೆಗೆ ಕರೆಸಿಕೊಂಡು ಲಂಚ ಪಡೆಯುವುದು ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಮನೆಯಲ್ಲಿ ಫಲಾನುಭವಿಗಳಿಂದ ₹ 20 ಸಾವಿರ ಲಂಚ ಪಿಡಿಒ ಪಡೆಯುತ್ತಿದ್ದಾನೆ. ಇನ್ನು ವಸತಿ ಯೋಜನೆಯ ಫಲಾನುಭವಿಗಳು ಪಿಡಿಒಗೆ ಲಂಚ ಕೊಟ್ಟರೇ ಮಾತ್ರ ಮನೆ ಮಂಜೂರು ಮಾಡುತ್ತಾರೆ. ಇಲ್ಲದಿದ್ದರೆ ಅಲೆದಾಟ ಪಡಬೇಕಾದ ಪರಿಸ್ಥಿತಿ ಬರುತ್ತೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv