ಕೆಎಸ್​ಆರ್​ಟಿಸಿ ಬಸ್​ ಚಾಲಕನ ಸಮಯಪ್ರಜ್ಞೆ: ತಪ್ಪಿದ ಭಾರಿ ದುರಂತ

ಬೆಳಗಾವಿ: ನಗರದ ಚೆನ್ನಮ್ಮ ಸರ್ಕಲ್​ನಲ್ಲಿ ಬೆಳಗಾವಿ ಮೂರನೇ ಘಟಕಕ್ಕೆ ಸೇರಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನ, ಸಮಯ ಪ್ರಜ್ಞೆಯಿಂದ ಗುರುವಾರ ಬೆಳಿಗ್ಗೆ ನಡೆಯಬೇಕಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ನಗರದ ಚೆನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಧಾರವಾಡದಿಂದ ಕಿತ್ತೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬೆಳಗಾವಿ ವಿಭಾಗದ ಬಸ್ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ತಕ್ಷಣ ಎಚ್ಚೆತ್ತ ಚಾಲಕ ಹತ್ತಿರದಲ್ಲೇ ಇದ್ದ ಕಟ್ಟೆಯೊಂದಕ್ಕೆ ಬಸ್ ತಿರುಗಿಸಿ ಡಿಕ್ಕಿ ಹೊಡೆಸಿದ್ದಾನೆ.
ಸದ್ಯ ಬಸ್​ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ. ಚಾಲಕನ ಸಮಯ ಪ್ರಜ್ಞೆ, ಕರ್ತವ್ಯ ನಿರ್ವಹಣೆ ಕಂಡು ಇದೀಗ ಸಾರಿಗೆ ಅಧಿಕಾರಿಗಳು ಚಾಲಕನನ್ನು ಪ್ರಶಂಸಿಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv