ಬಾಗಿಲು ಮುರಿದು 2 ಮನೆಗಳಲ್ಲಿ ಕಳ್ಳತನ

ಕೋಲಾರ: 2 ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಕೇಶವ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಕೇಶವನ ನಗರದಲ್ಲಿರುವ ದಿಲೀಪ್​ ಸಿಂಗ್​ ಎಂಬುವರ ಮನೆಯ ಬಾಗಿಲು ಮುರಿದು, 45 ಗ್ರಾಂ ಚಿನ್ನ ಸೇರಿದಂತೆ 4 ಲಕ್ಷ ನಗದು ಹಣ ದೋಚಿದ್ದಾರೆ. ಅಲ್ಲದೇ ಇದೇ ಬಡಾವಣೆಯಲ್ಲಿರುವ ಈರಪ್ಪ ಮನೆಯಲ್ಲಿ 25 ಗ್ರಾಂ ಚಿನ್ನ ಮತ್ತು ಒಡವೆಗಳನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.