ನಡೀತು ‘ಬ್ರಹ್ಮಚಾರಿ’ ಮುಹೂರ್ತ !

ನಿನಾಸಂ ಸತೀಶ್ ನಟನೆಯ ಬ್ರಹ್ಮಚಾರಿ‌ ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ಶೂಟಿಂಗ್ ಆರಂಭವಾಗಿದೆ. ಚಿತ್ರದ ಕಥೆ ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ಸಾಗಲಿದ್ದು ಹಲವಾರು ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆಯಲಿದೆ. ಕಿರುತರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿ ಸದ್ಯ ಡಿಮ್ಯಾಂಡ್ ಇರೋ ನಟಿಯಾಗಿರೋ ಅದಿತಿ ಪ್ರಭುದೇವ ಮೊದಲ ಬಾರಿಗೆ ಸತೀಶ್ ನೀನಾಸಂ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ಚಿತ್ರದಲ್ಲಿ ಅದಿತಿ ಗ್ರಂಥಾಲಯವೊಂದರ ಗ್ರಂಥಪಾಲಕಿಯಾಗಿ ನಟಿಸುತ್ತಿದ್ದು, ಸತೀಶ್ ಅವರ ಪಾತ್ರ ವಿಭಿನ್ನವಾಗಿರಲಿದೆ. ಈ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರಕ್ಕೆ ‘ಬ್ರಹ್ಮಚಾರಿ’ ಅಂತ ಚಿತ್ರತಂಡ ಟೈಟಲ್ ಇಟ್ಟಿದೆ. ಈಗಾಗಲೇ ‘ಬಾಂಬೆ ಮಿಠಾಯಿ’ ಮತ್ತು ‘ಡಬಲ್ ಇಂಜಿನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

‘100 ಪರ್ಸೆಂಟ್ ವರ್ಜಿನ್’ ಅನ್ನೋ ಸಬ್ ಟೈಟಲ್ ಇಟ್ಕೊಂಡು ಬರ್ತಿರೋ ಬ್ರಹ್ಮಚಾರಿ ಪಕ್ಕಾ ಕಮರ್ಶಿಯಲ್ ಜೊತೆಗೆ ಹಾಸ್ಯವಿರೋ ಎಂಟರ್ಟೇನಿಂಗ್ ಸಿನಿಮಾ. ಮೋಹನ್ ಚಂದ್ರ ನಿರ್ದೇಶನ ಹಾಗೂ ಉದಯ್‌ ಮೆಹ್ತಾ ನಿರ್ಮಾಣ ಚಿತ್ರಕ್ಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv