ಫುಟ್‌ಬಾಲ್‌ ಆಟಗಾರರು 9 ದಿನ ಗುಹೆಯಲ್ಲಿ ಬದುಕಿದ್ದೇಗೆ…?

ಥೈಲೆಂಡ್: ಥಾಮ್​​​ ಲುವಾಂಗ್​​​​​ ಗುಹೆಯಲ್ಲಿ ಸಿಲುಕಿದ್ದ ಅಂಡರ್‌-16 ಫುಟ್‌ಬಾಲ್‌ ತಂಡದ 12 ಮಂದಿ ಬಾಲಕರು ಕೊನೆಗೂ ಗುಹೆಯಿಂದ ಪಾರಾಗಿದ್ದಾರೆ. ಆದ್ರೆ, ಅವರು ರಕ್ಷಣಾ ಕಾರ್ಯಾಚರಣೆ ಆರಂಭಕ್ಕೂ ಮುನ್ನ 9 ದಿನ ಸರಿಯಾದ ಗಾಳಿ, ನೀರು ಹಾಗೂ ಊಟವಿಲ್ಲದೆ ಬದುಕಿದ್ದು, ಹೇಗೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಆಟಗಾರರನ್ನು ಆ ಶಕ್ತಿ ಬದುಕಿಸಿತ್ತು…!
12 ಆಟಗಾರರು ಗುಹೆಯಲ್ಲಿ ಸಿಲಿಕಿಕೊಂಡಾಗ ಜೊತೆಯಲ್ಲಿದ್ದ ಕೋಚ್‌ ಎಕಪಾಲ್‌, ಮಕ್ಕಳಿಗೆ ಯಾವುದೇ ಪ್ರಾಣಾಪಾಯ ಆಗದಂತೆ ಸಂಪೂರ್ಣ ಜಬಾವ್ದಾರಿ ವಹಿಸಿಕೊಂಡಿದ್ರು. ಊಟವಿಲ್ಲದೆ ಹೇಗೆ ಬದುಕ ಬಹುದು ಎಂಬುದರ ಬಗ್ಗೆ ಆ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿದ್ದಾರೆ. ಧ್ಯಾನವನ್ನು ಕಲಿಸಿಕೊಟ್ಟಿದ್ದಾರೆ. ಧ್ಯಾನದ ಮೂಲಕ ಶಕ್ತಿ ಹೊಂದುವಂತಹ ಶಿಕ್ಷಣವನ್ನು ಎಕ್‌ಪಾಲ್‌ ನೀಡಿದ್ದಾರೆ. ಮಕ್ಕಳಲ್ಲಿ ಮೊದಲು ಧೈರ್ಯ ತುಂಬಿದ್ದಾರೆ. ಬೌದ್ಧ ಸನ್ಯಾಸಿಯಾಗಿದ್ದ ಇವರು, ಧ್ಯಾನವನ್ನು ಕರಗತ ಮಾಡಿಕೊಂಡಿದ್ರು. ಪ್ರತಿಕೂಲ ಪರಿಸ್ಥಿತಿಯಲ್ಲೂ ಧ್ಯಾನ ಮಾಡಿದ್ರೆ ಆಗುವ ಅನುಕೂಲಗಳ ಬಗ್ಗೆ ಆ ಮಕ್ಕಳಿಗೆ ತಿಳಿಸಿದ್ರು. ಅದು ಕೊನೆಗೂ ಫಲ ನೀಡಿ ಎಲ್ಲಾ ಮಕ್ಕಳು ಬದುಕಿ ಬರುವಂತಾಗಿದೆ. ಅನಾಥವಾಗಿರುವ ಎಕ್‌ಪಾಲ್ ಅವರನ್ನು ಈ ಮಟ್ಟಕ್ಕೆ ಬೆಳಸಿದ್ದು ಕೂಡ ಧ್ಯಾನವೇ. ಹೀಗಾಗಿ ಅವರ ಈ ಶಿಕ್ಷಣ ಆ ಮಕ್ಕಳು 9 ದಿನಗಳ ಕಾಲ ಬದುಕಿ ಹೊರಬರಲು ಸಹಕಾರಿಯಾಗಿದೆ.