ಆನ್‌ಲೈನ್‌ನಲ್ಲಿ ಪ್ರೇಯಸಿಯನ್ನೇ ಸೇಲ್​ಗಿಟ್ಟ ಬಾಯ್​​ಫ್ರೆಂಡ್​..!

ಆನ್​ಲೈನ್​ ಸೈಟ್​​ಗಳಲ್ಲಿ ವಿಚಿತ್ರ ವಸ್ತುಗಳನ್ನ ಮಾರಾಟಕ್ಕಿಡುವುದನ್ನ ಕೇಳಿರ್ತೀರಾ. ಆದ್ರೆ ಇಲ್ಲೊಬ್ಬ ಭೂಪ ತನ್ನ ಪ್ರೇಯಸಿಯನ್ನೇ ಇ-ಬೇನಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಆತ ತಮಾಷೆಗಾಗಿ ತನ್ನ ಗರ್ಲ್​​ಫ್ರೆಂಡ್​​ ಮಾರಾಟಕ್ಕಿದ್ದಾಳೆ ಎಂದು ಸೇಲ್​​ ಹಾಕಿದ್ದ. ಆದ್ರೆ ಆಶ್ಚರ್ಯವೆಂಬಂತೆ ಆತನ ಗರ್ಲ್​​ಫ್ರೆಂಡ್​​ಗಾಗಿ 70 ಸಾವಿರ ಪೌಂಡ್ಸ್​​ (ಅಂದಾಜು 67 ಲಕ್ಷ) ಮೊತ್ತದ ವರೆಗೆ ಹರಾಜು ಬಂದಿದೆ.

ಡೇಲ್​​ ಲೀಕ್ಸ್​​, ತನ್ನ ಗೆಳತಿ ಕೆಲ್ಲಿ ಗ್ರೇವ್ಸ್​ ಜೊತೆ ಕುದುರೆ ಸವಾರಿಗೆ ಹೋಗಿದ್ದಾಗ, ಕುದುರೆಯ ಕಿಕ್​​ನಿಂದ ಇಬ್ಬರೂ ಗಾಯಗೊಂಡಿದ್ದರು. ಬಳಿಕ ಆನ್​ಲೈನ್​​ ಹರಾಜು ತಾಣದಲ್ಲಿ ತನ್ನ ಪ್ರೇಯಸಿಯನ್ನ ಸೇಲ್​​ಗಿಟ್ಟು, ಕೆಲವು ಪಾರ್ಟ್​​​ಗಳು ವರ್ಕ್​ ಆಗ್ತಿಲ್ಲ. ಹೆಚ್ಚಿನ ಹಾನಿಯೇನೂ ಆಗಿಲ್ಲ ಅಂತ ತಮಾಷೆಗಾಗಿ ಜಾಹೀರಾತು ನೀಡಿದ್ದ.

ಈ ಲಿಸ್ಟಿಂಗ್​​ಗೆ 24 ಗಂಟೆಯಲ್ಲೇ 100ಕ್ಕೂ ಹೆಚ್ಚು ಬಿಡ್ಸ್​ ಬಂದಿದ್ದು, ₹67 ಲಕ್ಷ ​ ದಾಟಿದೆ. ತಮಾಷೆಗಾಗಿ ಹಾಕಿದ ಪೋಸ್ಟ್​​ಗೆ ಈ ಮಟ್ಟಕ್ಕೆ ಪ್ರತಿಕ್ರಿಯೆ ಬಂದಿದ್ದು ನೋಡಿ ಸ್ವತಃ ಡೇಲ್​​ ಲೀಕ್ಸ್ ಆಶ್ಚರ್ಯಗೊಂಡಿದ್ದಾನೆ. ಇನ್ನು 24 ಗಂಟೆಗಳ ಬಳಿಕ ಇ-ಬೇ ಈ ಪೋಸ್ಟ್​ ಡಿಲೀಟ್​ ಮಾಡಿದೆ. ಮಾನವನ ಅಂಗಾಂಗಗಳ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv