ಜಮ್ಮು-ಕಾಶ್ಮೀರ ಟೂರಿಸಂ ನಿಷೇಧಿಸಬೇಕು : ಮನಿಷಾ ಕಯಾಂಡೆ

ಮುಂದಿನ ಎರಡು ವರ್ಷಗಳ ಕಾಲ ಜಮ್ಮು-ಕಾಶ್ಮೀರ ಟೂರಿಸಂನ ನಿಷೇಧಿಸಬೇಕೆಂದು ಶಿವಸೇನಾ ಎಂಎಲ್​ಸಿ ಮನಿಷಾ ಕಯಾಂಡೆ ಆಗ್ರಹಿಸಿದ್ದಾರೆ. ಪುಲ್ವಾಮಾದಲ್ಲಿ ನಡೆದ ಉಗ್ರರ ಘೋರ ಕೃತ್ಯವನ್ನು ಅವರು ಖಂಡಿಸಿದ್ದು, ಪ್ರತಿಸಲ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಸಿಆರ್​ಪಿಎಫ್​​​​ ಯೋಧರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರೇ ಉಗ್ರರನ್ನ ಬೆಂಬಲಿಸುತ್ತಾರೆ. ಅಲ್ಲದೇ, ಜಮ್ಮು-ಕಾಶ್ಮೀರ ನಿವಾಸಿಗಳು ಸೈನಿಕರ ಮೇಲೆ ಕಲ್ಲು ತೂರಾಟ, ಕಪಾಳ ಮೋಕ್ಷದಂತಹ ಹೀನ ಕೃತ್ಯದಲ್ಲಿ ತೊಡಗಿರ್ತಾರೆ. ಹೀಗಾಗಿ ಜಮ್ಮು-ಕಾಶ್ಮೀರ ಟೂರಿಸಂ ನಿಷೇಧಿಸಿ ಅಲ್ಲಿನ ಜನರಿಗೆ ಪಾಠ ಕಲಿಸಬೇಕು ಅಂತಾ ಮನಿಷಾ ಕಯಾಂಡೆ ಹೇಳಿದ್ದಾರೆ. ಇನ್ನೂ, ಚೀನಾದಿಂದ ಆಮದಾಗುವ ವಸ್ತುಗಳನ್ನು ಕೂಡ ನಿಷೇಧಿಸಬೇಕೆಂದು ಅವರು ಹೇಳಿದ್ದು, ಚೀನಾವು ಪಾಕಿಸ್ತಾನವನ್ನ ಭಾರತದ ವಿರುದ್ಧ ಛೂ ಬಿಡ್ತಿದೆ ಅಂತಾ ಕಿಡಿಕಾರಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv