ಆಂಧ್ರ ಪೊಲೀಸರ ಮೇಲೆ ಕಿಡ್ನಾಪ್​ ಆರೋಪ..!

ತುಮಕೂರು: ಯುವಕನೋರ್ವನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೀರೇಶ್​ ಎಂಬ ಯುವಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ₹10 ಲಕ್ಷ ಹಣಕ್ಕೆ ಬೇಡಿಕೆಯೊಡ್ಡಿದ್ದರು. ತಡರಾತ್ರಿ ಮೂರ್ನಾಲು ಜನರ ತಂಡ ಮನೆಯಲ್ಲಿದ್ದ ಮಹಿಳೆಯರನ್ನು ತಳ್ಳಿ ವೀರೇಶ್​ನನ್ನು ಅಪಹರಣ ಮಾಡಿದ್ದರು. ಅಲ್ಲದೆ ಹಣ ನೀಡಿದರೆ ಮಾತ್ರ ವೀರೇಶ್​ನನ್ನು ಬಿಡುತ್ತೇವೆ. ಇಲ್ಲದಿದ್ದರೆ ಶೂಟ್​ ಮಾಡಿ ಬೀಸಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೆ ವೀರೇಶ್​ನನ್ನು ಅಪಹರಣ ಮಾಡಿ ಮನಬಂದಂತೆ ಥಳಿಸಿದ್ದರು. ಹಣ ತರುವಂತೆ ಹೇಳು ಎಂದು ವೀರೇಶ್​ನಿಗೆ ಹಿಂಸೆ ನೀಡಿದ್ದರು. ವೀರೇಶ್​ನನ್ನು ಬಿಡುವಂತೆ ಗ್ರಾಮಸ್ಥರು ₹2.5 ಲಕ್ಷ ಹಣ ಹೊಂದಿಸಿ ದುಷ್ಕರ್ಮಿಗಳಿಗೆ ನೀಡಿದಾಗ ಬಿಟ್ಟು ಕಳುಹಿಸಿದ್ದಾರೆ.

ಇನ್ನು ಅಪಹರಣಕ್ಕೊಳಗಾಗಿದ್ದ ಯುವಕ ವೀರೇಶ್,​ ನನ್ನನ್ನು ಆಂಧ್ರ ಪೊಲೀಸರು ಕಿಡ್ನಾಪ್​ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಆಂಧ್ರದ ಕಮ್ಮದೂರು ಪೊಲೀಸರು ಅಪಹರಣ ಮಾಡಿ ಹಣ ತರುವಂತೆ ಹಿಂಸೆ ನೀಡಿದ್ದಾರೆ. ಗ್ರಾಮಸ್ಥರಿಂದ ₹2.5 ಲಕ್ಷ ರೂಪಾಯಿ ನೀಡಿದ ಮೇಲೆ ನನ್ನ ಬಿಟ್ಟು ಕಳುಹಿಸಿದ್ದಾರೆ. ಆಂಧ್ರ ಪೊಲೀಸರು ನನ್ನ ಮೇಲೆ ಮಟ್ಕಾ ಕೇಸ್​ ದಾಖಲಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ ಎಂದು ವೀರೇಶ್​ ಹೇಳಿದ್ದಾನೆ. ಆಂಧ್ರ ಪೊಲೀಸರ ವಿರುದ್ಧ ಪಾವಗಡ ತಾಲೂಕಿನ ವೈಎನ್​ಎಸ್​ ಕೋಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv