ಕಾಲೇಜಿನಲ್ಲಿ ಆರು ತಿಂಗಳ ಹಿಂದೆ ಮಾಡಿದ್ದ ಗಲಾಟೆಗೆ ಈಗ ಅರೆಸ್ಟ್​ ಆದ ಯುವಕ.!

ಮಂಗಳೂರು: ಆರು ತಿಂಗಳ ಹಿಂದೆ ಕಾಲೇಜ್​ನಲ್ಲಿ ಗಲಾಟೆ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದ್ದು ಗಲಾಟೆ ಮಾಡಿದ  ಯುವಕ ಪೊಲೀಸರಿಂದ ಬಂಧನಕ್ಕೊಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಖಾಸಾಗಿ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದ ಅಜಯ್ ಶೆಟ್ಟಿ ಕಳೆದ ಆರು ತಿಂಗಳ ಹಿಂದೆ ಪ್ರೇಮ‌ವಿಚಾರಕ್ಕೆ ಸಂಬಂಧಿಸಿದಂತೆ ಯುವಕನಿಗೆ ಥಳಿಸಿದ್ದು, ಹಲ್ಲೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ವಿಡಿಯೋವನ್ನು ಖುದ್ದು ಪರಿಶೀಲಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಯುವಕನ‌ ಬಂಧನಕ್ಕೆ ಸೂಚಿಸಿದ್ದು ಪುತ್ತೂರು ನಗರ ಠಾಣಾ ಪೊಲೀಸರು ಯುವಕ ಅಜಯ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಅಜಯ್ ಶೆಟ್ಟಿ ಸ್ನೇಹಿತರೇ ವಿಡಿಯೋ ವೈರಲ್ ಮಾಡಿದ್ದು, ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಗಲಾಟೆ ಇದೀಗ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv