ಮಹಿಳೆ ಕಾಲನ್ನು ಬಿಡಿಸಲು ರೈಲು ಬೋಗಿಯನ್ನೇ ತಳ್ಳಿದರು..!

ಮೆಸಾಚುಸೆಟ್ಸ್​: ಜಗತ್ತಿನಲ್ಲಿ ಬೇರೆಯವರು ಅಪಾಯದಲ್ಲಿದ್ದಾಗ ಕೆಲವರು ಮರುಗುತ್ತಾರೆ. ಇನ್ನು ಕೆಲವರು ಕಂಡೂ ಕಾಣದಂತೆ ನಿರ್ದಯಿಗಳಾಗಿ ವರ್ತಿಸುತ್ತಾರೆ. ಆದರೆ ಇಲ್ಲಿಯ ಜನರು ಒಬ್ಬರಿಗೆ ಸಹಾಯಹಸ್ತ ಚಾಚಲು ಹೋಗಿ ಯಾರೂ ಮಾಡದ ಸಾಹಸವನ್ನು ಮಾಡಿದ್ದಾರೆ.

ಸಾಮಾನ್ಯವಾಗಿ ಪ್ರತಿಭಟನೆ ಸಂದರ್ಭದಲ್ಲಿ ರೊಚ್ಚಿಗೆದ್ದ ಜನರು ಕಾರು, ಬಸ್​, ಲಾರಿ ಉರುಳಿಸುವುದನ್ನು ನೋಡಿದ್ದೇವೆ. ಆದರೆ ಮೆಸಾಚುಸೆಟ್ಸ್​ನ ಅವೆನ್ಯೂ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಅವರ ಕಾಲು ರೈಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ನಿಲ್ದಾಣದಲ್ಲಿದ್ದ ಸಹ ಪ್ರಯಾಣಿಕರು ಮಹಿಳೆಯ ಸಹಾಯಕ್ಕೆ ಮುಂದಾಗಿದ್ದಾರೆ. ಮಹಿಳೆಯ ಕಾಲನ್ನು ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಕೆಲ ಪ್ರಯಾಣಿಕರು ರೈಲು ಬೋಗಿಯನ್ನೇ ತಳ್ಳಿ, ಮಹಿಳೆಯ ಕಾಲನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಇದು ನಿಲ್ದಾಣದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಫುಲ್​​​ ವೈರಲ್​ ಆಗಿದೆ.

ಸಾರ್ವಜನಿಕರು ತಮ್ಮ ಒಗ್ಗಟ್ಟಿನಿಂದ ಮಹಿಳೆಯನ್ನು ಕಾಪಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv