ಪೊಲೀಸರ ಮೇಲೆ ಬೋಪಯ್ಯ ಆವಾಜ್..!

ಕೊಡಗು: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್​​ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಮುಂಜಾನೆಯಿಂದಲೂ ಕೂಡ ವಾಹನ ಸಂಚಾರಕ್ಕೆ ಬಿಜೆಪಿ ಕಾರ್ಯಕರ್ತರು ತಡೆ ಉಂಟುಮಾಡಿದ್ದಾರೆ. ನಗರಕ್ಕೆ ಆಗಮಿಸುತ್ತಿರುವ ವಾಹನಗಳನ್ನ ಅಡ್ಡಗಟ್ಟುವ ಮೂಲಕ ಶಾಸಕ ಕೆ.ಜಿ ಬೋಪಯ್ಯ ಹಾಗೂ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದರು. ಶಾಸಕರು ಬಲವಂತವಾಗಿ ವಾಹನಗಳನ್ನ ತಡೆಯುತ್ತಿರೋದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಪ್ರಶ್ನಿಸಿದ ಪೊಲೀಸರಿಗೆ ಕೆ.ಜಿ.ಬೋಪಯ್ಯ ಆವಾಜ್ ಹಾಕಿದ್ದಾರೆ ಹಾಗೂ ಕೆ.ಜಿ ಬೋಪಯ್ಯನವರಿಗೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ .

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv