ಶ್ರೀಲಂಕಾದಲ್ಲಿ ಮತ್ತೆ ಸ್ಫೋಟ, ಕಂಗಾಲಾದ ಜನತೆ

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಬಾಂಬ್​ ಸ್ಫೋಟಗಳ ಹಾವಳಿ ಇನ್ನೂ ನಿಂತಿಲ್ಲ. ಕೊಲಂಬೋದಿಂದ 40 ಕಿಮೀ ದೂರದಲ್ಲಿ ಪುಗೋಡಾ ಎಂಬ ಪಟ್ಟಣದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ. ನ್ಯಾಯಾಲಯದ ಹಿಂಭಾಗದಲ್ಲಿ ಖಾಲಿ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಹಾಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಕುರಿತು ಸ್ಥಳೀಯರು ಮತ್ತು ಪೊಲೀಸರು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆಗೆ ಇಳಿದಿವೆ. ಕಳೆದ ಭಾನುವಾರ ಈಸ್ಟರ್​​ ಹಬ್ಬದಂದು ಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟಗಳು ನಡೆದಿದ್ದವು. ಅದರಲ್ಲಿ 369 ಮಂದಿ ಅಸುನೀಗಿದ್ದರು. ಇದೀಗ ಮತ್ತೆ ಮತ್ತೆ ಬಾಂಬ್​ ಸ್ಫೋಟಗಳು ನಡೆದಿರುವುದು ಲಂಕಾ ಜನತೆಯನ್ನು ಬೆಚ್ಚಿಬೀಳಿಸಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv