‘ಹೈವೇ’ಗಿಳಿದ ‘ಕ್ವೀನ್’ ಮಾತಿನ ಸಮರ..!

ಬಾಲಿವುಡ್​ನ ಕ್ವೀನ್ ಕಂಗನಾ ರಣಾವತ್ ಹಾಗೂ ಕ್ಯೂಟ್ ನಟಿ ಆಲಿಯಾ ಭಟ್ ನಡುವೆ ಮಾತಿನ ಯುದ್ಧ ಮುಂದುವರಿದಿದೆ. ಕಂಗನಾ ಌಕ್ಟ್ ಮಾಡಿರುವ ಮಣಿಕರ್ಣಿಕಾ ರಿಲೀಸ್ ಆದಾಗಿನಿಂದಲೂ ಇಬ್ಬರ ನಡುವೆ ಮಾತಿನ ಸಮರ ನಡೀತಲೇ ಇದೆ. ಆಲಿಯಾ ಭಟ್​ನಂಥ ಬಾಲಿವುಡ್ ಸೆಲೆಬ್ರಿಟಿಗಳು ನನ್ನ ಮಣಿಕರ್ಣಿಕಾ ಚಿತ್ರಕ್ಕೆ ಬೆಂಬಲ ಕೊಡುತ್ತಿಲ್ಲ ಅಂತ ಆರೋಪಿಸಿದ್ರು. ಇದಕ್ಕೆ ಆಲಿಯಾ, ಇದರ ಬಗ್ಗೆ ನಂಗೇನೂ ಗೊತ್ತಿಲ್ಲ. ನಾನು ಕಾಂಟ್ರೊವರ್ಸಿಗಳನ್ನ ಫಾಲೋ ಮಾಡ್ತಿಲ್ಲ. ಈ ಬಗ್ಗೆ ಕಂಗನಾ ಕೂಡ ಬೇಸರ ಮಾಡಿಕೊಳ್ಳಲ್ಲ ಅಂದುಕೊಳ್ತೇನೆ ಅಂತ ಹೇಳೋ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ರು.

ಆದ್ರೆ ಕಂಗನಾ ರಣಾವತ್ ಮಾತ್ರ ಆಲಿಯಾರ ಈ ಉತ್ತರದಿಂದ ಸಂತೋಷಗೊಂಡಿಲ್ಲ ಅನಿಸುತ್ತೆ. ಅದಕ್ಕೆ ತಮ್ಮ ವಾಗ್ಯುದ್ಧವನ್ನ ಮುಂದುವರಿಸಿದ್ದಾರೆ. ಆಲಿಯಾ ಇನ್ನಾದ್ರೂ ಒಂದಷ್ಟು ಧೈರ್ಯ ಬೆಳೆಸಿಕೊಳ್ಳಬೇಕು. ಮಣಿಕರ್ಣಿಕಾದಂಥ ಮಹಿಳಾ ಸಬಲೀಕರಣ ಹಾಗೂ ರಾಷ್ಟ್ರೀಯತೆಯ ಸಂದೇಶವಿರುವ ಚಿತ್ರವನ್ನ ಬೆಂಬಲಿಸಬೇಕು ಅಂತ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ, ನಾನು ಆಲಿಯಾಳನ್ನ ಯಶಸ್ವಿ ನಟಿ ಅಂತ ಅಂದುಕೊಂಡಿಲ್ಲ. ಆಕೆಯ ಅಸ್ತಿತ್ವವಿರೋದೇ ಕರಣ್​ಜೋಹರ್​ನ ಕೈಗೊಂಬೆಯಾಗಿ ಅಂತ ಕಟುವಾಗಿ ಟೀಕಿಸಿದ್ದಾರೆ.

ಇದರಿಂದ ಆಲಿಯಾ ಕೂಡ ತನ್ನ ಸಹನೆಯನ್ನ ಕಳೆದುಕೊಂಡಿದ್ದು, ನಾನು ಈ ಬಗ್ಗೆ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡುವುದಿಲ್ಲ. ಕಂಗನಾ ಜೊತೆ ಮುಖಾಮುಖಿಯಾಗಿ ಮಾತಾನಾಡುತ್ತೇನೆ ಅಂತ ಹೇಳಿದ್ದಾರೆ. ನಾನು ಕಂಗನಾರ ನಟನೆ, ಚಿತ್ರಗಳ ಆಯ್ಕೆ ಬಗ್ಗೆ ಹೆಮ್ಮೆ ಪಡುತ್ತೇನೆ. ಅವರಿಗೆ ನೋವಾಗಲಿ ಅಂತ ನಾನೇನೂ ಹೇಳಿರಲಿಲ್ಲ. ಆದ್ರೂ ಅವರೇಕೆ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರು ಈ ರೀತಿ ವರ್ತಿಸುತ್ತಾರೆ ಅಂತ ಭಾವಿಸಿರಲಿಲ್ಲ ಎಂದು ಆಲಿಯಾ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv