ಡಿವೈಡರ್​ಗೆ ಬುಲೆರೋ ಡಿಕ್ಕಿ: ಓರ್ವ ಸಾವು

ಬಾಗಲಕೋಟೆ: ರಸ್ತೆ ಬದಿ ಡಿವೈಡರ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಡವಳಗಿ ಗ್ರಾಮದ ನಿಂಗಪ್ಪ ಬೀರಗೊಂಡ (48) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ಲದಿಂದ ಡವಳಗಿ ಗ್ರಾಮಕ್ಕೆ ಹೋಗುವಾಗ ಈ ದುಘರ್ಟನೆ ಸಂಭವಿಸಿದ್ದು, ಗ್ರಾನೈಟ್ ಒಯ್ಯಲು ವಿಜಯಪುರದಿಂದ ಇಳಕಲ್​ಗೆ ಮೃತ ನಿಂಗಪ್ಪ ಮತ್ತು ಸ್ನೇಹಿತರು ಆಗಮಿಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಹುನಗುಂದ ಪೊಲೀಸರ ಭೇಟಿ, ಪರಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv