ಬೈಕರ್ಸ್​​ ಫೇವರಿಟ್​ BMW ಬೈಕ್, ಸ್ಪೀಡ್​ ಅಷ್ಟೇ ಅಲ್ಲ.. ರೇಟ್​ ಕೇಳಿದ್ರೂ ತಲೆ ತಿರಗುತ್ತೆ..!

ಬೈಕರ್​ಗಳ ಹಾಟ್​ ಫೇವರಿಟ್​ ಹೊಸ ಮಾದರಿಯ ಬಿಎಂಬ್ಲ್ಯೂ F​ 850 GS ಬೈಕ್​ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. 2018 ರಲ್ಲಿ ಈ ಬೈಕ್​ನ ಇಟಲಿಯ ಮಿಲಾನ್​​ ​ನಲ್ಲಿ ಅನಾವರಣ ಗೊಳಿಸಲಾಗಿತ್ತು. ಇದೀಗ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಯುವಕರ ಕ್ರೇಜ್​ನ ಮತ್ತಷ್ಟು ಹೆಚ್ಚಿಸಿದೆ.

​853 ಸಿಸಿ ಇಂಜಿನ್​ ಸಾಮರ್ಥ್ಯದ ಈ ಬೈಕ್,​ ಲಾಂಗ್​ ರೈಡ್​ಗಳನ್ನು ಇಷ್ಟಪಡುವವರಿಗೆ ​ ಹೇಳಿಮಾಡಿಸಿದ್ದಾಗಿದೆ. ವಿಶೇಷ ಅಂದ್ರೆ ಈ ಬೈಕ್​ನಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಎರಡು ಎಂಜಿನ್​ಗಳಿದ್ದು, 6 ಹೈ ಸ್ಪೀಟ್​ ಗೇರ್​ಗಳಿವೆ. ಈ ಬೈಕ್​ ಗಂಟೆಗೆ 197 ಕಿ. ಮೀ ವೇಗದಲ್ಲಿ ಮುನ್ನುಗ್ಗುತ್ತದೆ.

ಹಿಂದಿನ ವೀಲ್​ಗೆ 17 ಇಂಚು ಮತ್ತು ಮುಂದಿನ ವೀಲ್​ಗೆ 21 ಇಂಚು ದಪ್ಪ ಸ್ಪೋಕ್ಸ್​ಗಳನ್ನು ಅಡ್ಡವಾಗಿ ಹಾಕಲಾಗಿದೆ. ಸಸ್ಪೆಂಷನ್ ಹಾಗೂ ರೋಡ್​ ಗ್ರಿಪ್​ಗೆ ಹೆಚ್ಚು ಗಮನ ಕೊಟ್ಟು ನಿರ್ಮಾಣ ಮಾಡಲಾಗಿರುವ ಈ ಬೈಕ್​ನಲ್ಲಿ ASC ( Automatic Stability Control) ​ ಅಳವಡಿಸಲಾಗಿದೆ. ಇದರಿಂದ ಬೈಕರ್​ಳಿಗೆ ಫುಲ್​ ಸೇಫ್ಟಿ ಇರಲಿದೆ.

ಜೊತೆಗೆ 23 ಲೀಟರ್​ ಸಾಮರ್ಥ್ಯದ ಪೆಟ್ರೋಲ್​ ಟ್ಯಾಂಕ್​, 875 ಮಿಮಿ ಎತ್ತರದ ಸೀಟ್, ಎಲ್​ಇಡಿ ಹೆಡ್​ ಲೈಟ್​, ಬ್ಲೂ ಟೂತ್, TFT ಡಿಸ್​ಪ್ಲೇ​ ವ್ಯವಸ್ಥೆ ಇದೆ. ಫೋನ್​ ಕಾಲ್​ ಹಾಗೂ ಮ್ಯೂಸಿಕ್​ನ ​ಬ್ಲೂ ಟೂತ್ ಮೂಲಕ ಕನೆಕ್ಟ್​ ಮಾಡಿ ಆಪರೇಟ್​ ಮಾಡಬಹುದಾಗಿದೆ. ಡಿಸ್​ಪ್ಲೇ ಮೂಲಕ ನಾವಿಗೇಶನ್​ ಮತ್ತಷ್ಟು ಸುಲಭವಾಗಿರೋದು ವಿಶೇಷ. ಈ ಅತ್ಯಾಕರ್ಷಕ ಬೈಕ್​ನ ಬೆಲೆ ಬರೋಬ್ಬರಿ ₹15.40 ಲಕ್ಷ. ಭಾತರದಲ್ಲೂ ಬೈಕ್​ನ ಬುಕ್​ ಓಪನ್​ ಆಗಿದ್ದು, ವೀಕ್​ ಎಂಡ್​ನಲ್ಲಿ ಲಾಂಗ್​ ರೈಡ್​ ಪ್ಲಾನ್​ ಮಾಡೋ ಬೈಕರ್​ಗಳಿಗೆ ಈ ಬೈಕ್​ ಪಕ್ಕಾ ಇಷ್ಟವಾಗುತ್ತೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv