ರಣಾಂಗಣವಾಯ್ತು ವೋಟಿಂಗ್ ಬೂತ್.. ಟಿಡಿಪಿ-YSR ಕಾಂಗ್ರೆಸ್​ ನಡುವೆ ಮಾರಾಮಾರಿ..!

ಆಂಧ್ರಪ್ರದೇಶ: ವಿಧಾನಸಭೆ ಚುನಾವಣೆಯ ಮತದಾನದ ವೇಳೆ ಡಿಟಿಪಿ (Telugu Desam Party ) ಹಾಗೂ ವೈಎಸ್​ಆರ್​ಸಿಪಿ(YSR Congress Party) ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಇಳೂರು ಟಿಡಿಪಿ ಎಂಎಲ್​ಎ ಬಡೆತಿ ಬುಜ್ಜಿ ವೈಎಸ್​​ಆರ್​ಸಿಪಿ ಕಾರ್ಯಕರ್ತರ ಮೇಲೆ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿದೆ. ವೆಸ್ಟ್​ ಗೋದಾವರಿಯ ಸನಿವಾರಪೇಟೆಯಲ್ಲಿ ಈ ಗಲಾಟೆ ನಡೆದಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವೋಟಿಂಗ್ ನಡೆಯುತ್ತಿದ್ದ ವೇಳೆ ಗಲಾಟೆ ನಡೆದಿದೆ. ನಾವು ವೋಟಿಂಗ್ ಮಾಡಲು ಬೂತ್​ಗೆ ಬಂದಿದ್ವಿ. ಈ ವೇಳೆ ಕಾರಿನಿಂದ ನಾಲ್ಕು ಜನ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಓರ್ವ ಶಾಸಕರಾಗಿ ಹೀಗೆ ಮಾಡಿದ್ದು ಸರೀನಾ? ಅವರು ಶಾಸಕರೋ ಅಥವಾ ರೌಡಿನೋ? ಅವರು ಯಾಕೆ ಗನ್​​ ಮ್ಯಾನ್​ ಹೊಂದಿರುತ್ತಾರೆ? ಜನರಿಗೆ ಹೊಡೆಯುವುದಕ್ಕೆ..? ನಾವು ವೋಟ್​ ಮಾಡಲು ಬಂದಾಗ ಈ ಕೃತ್ಯ ನಡೆಸಿದ್ದಾರೆ ಅಂತಾ ವೈಎಸ್​ಆರ್​​ ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕೆಲ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರೋದನ್ನ ಕಾಣಬಹುದಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv