ದೃಷ್ಟಿ ವಿಕಲಚೇತನರಾದ ಸೋದರಿಯರಿಂದ ಮತದಾನ..!

ಕೊಪ್ಪಳ: ಕೊಪ್ಪ‌ಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಾರ್ಡ್ ನಂ 7 ರಲ್ಲಿ ಒಂದೇ ಕುಟುಂಬದ ಮೂರು ದೃಷ್ಟಿ ವಿಕಲಚೇತನರಾದ ಅಕ್ಕತಂಗಿಯರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಗರದ ಸೈಲಾನ್ಪುರ ನಿವಾಸಿಗಳಾದ ಗವಿಸಿದ್ದಮ್ಮ, ಮಂಜುಳ, ಶಿಲ್ಪಾ ಎಂಬ ದೃಷ್ಟಿ ವಿಕಲಚೇತನ ಸೋದರಿಯರು ಸುಡುಬಿಸಿಲಿನಲ್ಲಿಯೂ ಕೂಡ ಅಮ್ಮನ ಆಸರೆ ಪಡೆದು ಬಂದು ಬೂತ್ ನಂ 106 ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv