ಮೊದಲು ಲೇಖನ ಬರೆದ್ರು, ನಂತರ ಕ್ಷಮೆ ಕೇಳಿದ್ರು..!

ದೆಹಲಿ: ಪ್ರಿಯಾಂಕಾ ಚೋಪ್ರಾ’ ಮಾಡರ್ನ ಡೇಸ್​ ಸ್ಕ್ಯಾಮ್​ ಆರ್ಟಿಸ್ಟ್​’ ಅಂತ, ವೆಬ್​ಸೈಟ್​ನಲ್ಲಿ ಲೇಖನ ಬರೆದಿದ್ದಕ್ಕೆ, ನಿಕ್​ ಜೋನಸ್​ ಸಹೋದರ ಜೋ ಜೋನಸ್​ ಫುಲ್ ಗರಂ ಆಗಿದ್ರು. ಸಂಪಾದಕಿ ಮಾರಿಯಾ ಸ್ಮಿತ್​ ಬರೆದ ಲೇಖನದಲ್ಲಿ ನಿಕ್​ ಕುರಿತಾಗಿಯೂ ಅವಹೇಳನಕಾರಿಯಾಗಿ ಬರೆಯಲಾಗಿದೆ ಅಂತ ಜೋ ಆಕ್ರೋಶ ವ್ಯಕ್ತ ಪಡಿಸಿದ್ರು. ಆದ್ರೆ ಈಗ ಈ ಕುರಿತು ಕ್ಷಮೆ ಕೇಳಿರುವ ಸಂಪಾದಕಿ, ವೆಬ್​ಸೈಟ್​ನಿಂದ ಲೇಖನವನ್ನ ತೆಗೆದಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೇ ಪ್ರಿಯಾಂಕ ಹಾಗೂ ನಿಕ್​ ಕುರಿತಾಗಿ ಹಾಕಿರುವ ಎಲ್ಲಾ ಲೇಖನವನ್ನ ತೆಗೆದಿರುವುದಾಗಿಯೂ ಹೇಳಿಕೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv