ಈ ಗ್ರಾಮದ ಮನೆಗಳಲ್ಲಿ ಪಾತ್ರೆಗಳೇಕೆ ತನ್ನಿಂತಾನೇ ಉರುಳಿಬೀಳ್ತಿವೆ?

ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲೂಕಿನ ಕೆಲ ಗ್ರಾಮಗಳಲ್ಲಿನ ನಿವಾಸಿಗಳು ಭಯದ ನೆರಳಲ್ಲೇ ಕಾಲದೂಡುತ್ತಿದ್ದಾರೆ. ಇಲ್ಲಿನ ಜನರಿಗೆ ಬುಧವಾರ ರಾತ್ರಿ ವಿಚಿತ್ರ ಅನುಭವಗಳಾಗಿವೆಯಂತೆ. ಭೂಮಿಯಿಂದ ವಿಚಿತ್ರ ಶಬ್ಧಗಳು ಕೇಳಿಬಂದಿವೆ.

ಕಳಸಾ ಹೋಬಳಿಯ ಐವಾರಪಲ್ಲಿ, ಪೆದ್ದುಂಮೆಕೆ ಪಲ್ಲಿ, ವೆಂಕಟರಾಮನಪಲ್ಲಿ ಹಾಗೂ ಲಘುಮದ್ದೆಪಲ್ಲಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ರಾತ್ರಿ ವಿಚಿತ್ರ ಶಭ್ದಗಳು ಕೇಳಿಬಂದಿವೆಯಂತೆ. ಭೂಮಿ ನಡುಗಿದಂಥ ಅನುಭವವೂ ಕೆಲ ಕಾಲ ಗ್ರಾಮಸ್ಥರನ್ನು ನಿದ್ದೆಗೆಡಿಸಿತ್ತು. ಕೆಲವು ಮನೆಗಳಲ್ಲಿ ಪಾತ್ರೆಗಳು ನೆಲ್ಲಕ್ಕುರುಳಿದ್ದು ಜನ ಭೀತಿಯಿಂದ ನಡು ರಸ್ತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಭಯ ಹುಟ್ಟಿಸುವ ವಾತಾವರಣ ಸೃಷ್ಟಿಯಾಗಿದ್ದರೂ, ಯಾವುದೇ ಅವಘಡಗಳು ಸಂಭವಿಸದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಆದ್ರೆ, ಇದೆಲ್ಲಾ ಯಾಕೆ ಆಗ್ತಿದೆ ಅನ್ನೋ ಬಗ್ಗೆ ಗ್ರಾಮಸ್ಥರದಲ್ಲಿ ಆತಂಕದ ಜೊತೆಗೆ ಅಚ್ಚರಿಯೂ ಕಾಡ್ತಿದೆ. ಮೊದಲು ಭೂಕಂಪ ಅಂತ ಭಯಬಿದ್ದಿದ್ದ ಜನ, ಈಗ ಬಾನಮತಿಯ ಕಾಟ ಅಂತಲೂ ಭೀತಿಗೊಳಗಾಗಿದ್ದಾರೆ. ಜನರ ಭಯ ಮತ್ತಷ್ಟು ಹೆಚ್ಚಿಸುವಂತೆ ಮನೆಯೊಳಗೆ ಹೋದ್ರೆ, ಸದ್ದು ಕೇಳಿ ಬರ್ತಾ ಇದೆಯಂತೆ. ಹೀಗಾಗಿ ಏನ್ ಮಾಡೋದು ಅಂತ ತೋಚದೆ ಜನ ಭಯದ ವಾತಾವರಣದಲ್ಲೇ ಕಾಲ ಕಳೀತಿದ್ದಾರೆ.

 

 

 

Leave a Reply

Your email address will not be published. Required fields are marked *