ರಾಮನಗರದಲ್ಲಿ ಮೋದಿ ಮೋದಿ ಘೋಷಣೆ, ಅನಿತಾ ಕುಮಾರಸ್ವಾಮಿಗೆ ಮುಜಗುರ

ರಾಮನಗರ: ಮುಖ್ಯಮಂತ್ರಿ ಹೆಚ್​.ಡಿಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ,ಇಂದು ರಾಮನಗರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ತಾಲೂಕು ಕಚೇರಿ ಬಳಿ ಸ್ಥಳೀಯ ಜೆಡಿಎಸ್-ಬಿಜೆಪಿ ನಾಯಕರು, ಕಾರ್ಯಕರ್ತರು ಎದುರು ಬದರಾದರು. ಸ್ಥಳದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜೋರಾಗಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ರು.  ಇದರಿಂದ ಅನಿತಾ ಕುಮಾರಸ್ವಾಮಿ ಕೆಲ ಕ್ಷಣ ಕಾಲ ವಿಚಲಿತರಾದಂತೆ ಕಂಡು ಬಂತು, ಜೊತೆಗೆ ಅವರಿಗೆ ಮುಜುಗುರವುಂಟಾದ ಪ್ರಸಂಗ ನಡೆಯಿತು. ಸಿಎಂ ಕುಮಾರಸ್ವಾಮಿ  ಚುನಾವಣೆಯಲ್ಲಿ ಗೆದ್ದ ಬಳಿಕ  ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು, ಹೀಗಾಗಿ ತೆರಾವಾಗಿರುವ ರಾಮನಗರ ವಿಧಾನ ಸಭಾ ಕ್ಷೇತ್ರಕ್ಕೆ ಅವರ ಪತ್ನಿ ನಾಮಪತ್ರ ಸಲ್ಲಿಸಲು ಇಂದು ರಾಮನಗರ ತಾಲೂಕು ಕಚೇರಿಗೆ ಆಗಮಿಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv