‘ಲೋಕಸಭಾ ಉಪಚುನಾವಣೆ ಮಹಾಭಾರತದ ಯುದ್ಧದಂತೆ’-ಶ್ರೀರಾಮುಲು

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮಹಾಭಾರತದ ಯುದ್ಧದಂತೆ. ಅಲ್ಲಿ ಪಾಂಡವರು, ಇಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಶಾಸಕ ಶ್ರೀರಾಮುಲು‌ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಇತಿಹಾಸ ಮರು ಕಳಿಸುತ್ತದೆ. ಸರ್ಕಾರವೇ ಬರಲಿ, ಪ್ರಭಾವಿಗಳೇ ಬರಲಿ. ನಾವು ಗೆದ್ದೇ ಗೆಲ್ತೇವೆ. ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ. ಹಾಗಾಗಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಶ್ರೀರಾಮುಲು ಹೇಳಿದರು.

‘ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. 5 ಜನರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದ್ದು, ನಾಳೆ ಅಂತಿಮವಾಗಿ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಯಾರಿಗೆ ಟಿಕೆಟ್ ಸಿಕ್ಕರೂ‌ ಗೆಲ್ಲಿಸುತ್ತೇವೆ. ಶಾಂತಾ ಕೂಡ ಆಕಾಂಕ್ಷಿಯಲ್ಲಿ ಒಬ್ಬರು’ ಎಂದು ಶಾಸಕ ಶ್ರೀರಾಮಲು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv