ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ: ಮೊಯ್ಲಿ ಭವಿಷ್ಯ

ಮೈಸೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಸಿದ್ದರಾಮಯ್ಯನವರ ಬಜೆಟ್​ನಲ್ಲಿದ್ದ ಕೆಲ ಕಾರ್ಯಕ್ರಮಗಳನ್ನು ಹೆಚ್​.ಡಿ. ಕುಮಾರಸ್ವಾಮಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕಿದೆ. ತೃತೀಯ ರಂಗ ಒಂದಾಗುತ್ತವೆ ಅನ್ನೋ ವಿಚಾರ ಇದೆ ಅಂತ ವೀರಪ್ಪ ಮೊಯ್ಲಿ ಹೇಳಿದ್ದಾರೆ. 2019 ರಲ್ಲಿ ಬಿಜೆಪಿ ಸೋಲುತ್ತದೆ. ಕೆಲ ರಾಜ್ಯಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಬೇರೆ ಪಕ್ಷಗಳ ಜತೆ ಹೊಂದಾಣಿಕೆ ಕಷ್ಟ. ಆದರೆ ದೇಶದ ರಾಜಕೀಯ ಚುನಾವಣೆಯ ವಿಚಾರದಲ್ಲಿ ಒಂದಾಗುವ ಸಾಧ್ಯತೆಯಿದೆ. ಬಿಜೆಪಿಯವರಿಗೆ ತಮ್ಮ ಸೋಲಿನ ಅರಿವು ತಿಳಿದಿದೆ. ಅದರಿಂದಲೇ ಅವರು ಕೆಲ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
‘ರಾಜಕಾರಣದಲ್ಲಿ ಕಾಲೆಳೆಯೋರು ಜಾಸ್ತಿ‘’
ರಾಜಕೀಯದಲ್ಲಿ ಕುತಂತ್ರಗಳು ಇದ್ದೇ ಇರುತ್ತವೆ. ಬೇರೆಯವರನ್ನು ಕಾಲೆಳೆಯುವುದು, ಹಾಗೂ ನಾವು ಸಾಚಾಗಳು ಎಂದು ಸಮರ್ಥನೆ ಮಾಡಿಕೊಳ್ಳುವುದು ರಾಜಕೀಯದಲ್ಲಿ ಹೆಚ್ಚು ಅಂತ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆರ್​ಬಿಐ ನ ಕೆಲ ನಿರ್ಧಾರಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಅನೇಕ ಬ್ಯಾಂಕ್​ಗಳು ನಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಆರ್​ಬಿಐ ನವರು ನಮಗೆ ಸರಿಯಾದ ಅಧಿಕಾರ ಇಲ್ಲವೆಂದು ಹೇಳಿರುವುದಕ್ಕೆ ಸಂಬಂಧಿಸಿ, ನಿಮ್ಗೆ ಯಾವ ರೀತಿಯ ಅಧಿಕಾರ ಬೇಕು ಅಂತ ಕೇಳಿದ್ದೇವೆ ಎಂದು ಹೇಳಿದ್ದಾರೆ. ಪಿ ಜಿ ಆರ್ ಸಿಂಧ್ಯಾ, ಡಾ.ಮನಮೋಹನ್ ಸಿಂಗ್, ದ್ವಿಗ್ವಿಜಯ್ ಸಿಂಗ್ ನಾನು ಆರ್ಥಿಕ ಸ್ಥಾಯಿ ಸಮಿತಿಯಲ್ಲಿದ್ದು, ಇದುವೆರೆಗೆ ಒಟ್ಟು 64 ವರದಿಗಳನ್ನು ಕೊಟ್ಟದ್ದೇವೆ. ಮುಂದಿನ ದಿನಗಳಲ್ಲಿ ನೋಟ್​ ಅಮಾನ್ಯೀಕರಣದ ಬಗ್ಗೆ ಕೂಡ ವರದಿ ಸಲ್ಲಿಸುತ್ತೇವೆ, ನಾವು ಕೊಟ್ಟ ವರದಿಗಳಲ್ಲಿ ಕೆಲವೊಂದನ್ನು ಎಲ್ಲರೂ ಒಪ್ಪಿದ್ದಾರೆ. ಆದರೂ ಕೆಲವನ್ನು ರಿಜೆಕ್ಟ್​ ಮಾಡಿದ್ದಾರೆ. ನಾವು ಕೊಟ್ಟ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ್ದರ ಪರಿಣಾಮ ದುಷ್ಪರಿಣಾಮಗಳು ಎದುರಿಸಬೇಕಾಗಿದೆ.