ರಾಹುಲ್​ ಗಾಂಧಿಯೇ ಇರಲಿ ಅಂತಿದ್ದಾರೆ ಘಟಾನುಘಟಿ ನಾಯಕರು

ನವದೆಹಲಿ: ಮೋದಿಯ ಪ್ರಚಂಡ ಜಯ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್​​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. 2019ರ ಲೋಕಸಭೆಯ ಹೀನಾಯ ಸೋಲು ಕಾಂಗ್ರೆಸ್​ನಲ್ಲಿ​ ಅಧ್ಯಕ್ಷ ಸ್ಥಾನಕ್ಕೆ ಬಿಕ್ಕಟ್ಟು ತಂದಿಟ್ಟಿದೆ. ಸೋಲಿನ ಬಳಿಕ ತಾನು ಅಧ್ಯಕ್ಷ ಸ್ಥಾನದಲ್ಲಿ ಮಂದುವರಿಯಲ್ಲ ಅಂತ ಪಟ್ಟು ಹಿಡಿದಿರುವ ರಾಹುಲ್​ ಗಾಂಧಿ, ಕಾಂಗ್ರೆಸ್​​ಗೆ ನೂತನ ಅಧ್ಯಕ್ಷರ ನೇಮಕಕ್ಕಾಗಿ ಒಂದು ತಿಂಗಳ ಡೆಡ್​ಲೈನ್​ ಕೊಟ್ಟಿದ್ದಾರೆ. ಮತ್ತೊಂದು ಕಡೆ ರಾಹುಲ್​ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಕಾಂಗ್ರೆಸ್​ನ ಹಿರಿಯ ಘಟಾನುಘಟಿ ನಾಯಕರು ಮನವಿ ಮಾಡುತ್ತಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್​ ಸೇರಿದಂತೆ ಕಾಂಗ್ರೆಸ್​ನ ಹಲವು ಮುಖಂಡರು ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ರಾಹುಲ್​ಗೆ ಮನವಿ ಮಾಡಿದ್ದಾರೆ. ಇನ್ನು ಯುಪಿಎ ಕೂಟದ ಮೈತ್ರಿ ಪಕ್ಷಗಳು ಕೂಡ ರಾಹುಲ್​ ಪರ ಬ್ಯಾಟ್​ ಬೀಸಿವೆ. ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ರಿಂದ ಹಿಡಿದು, ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟ್ಯಾಲಿನ್​ವರೆಗೂ ಎಲ್ಲರೂ ರಾಹುಲ್​ಗೆ ಸೋಲಿನ ಬಗ್ಗೆ ಚಿಂತಿಸಬೇಡಿ, ನೀವೆ ಅಧ್ಯಕ್ಷರಾಗಿ ಮುಂದುವರಿಯಿರಿ ಅಂತ ಮನವಿ ಮಾಡುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv