ಚಾಮುಂಡೇಶ್ವರಿ ಸೋಲನ್ನ ಸಿದ್ದರಾಮಯ್ಯ ಜೀವನದಲ್ಲಿ ಮರೆಯಲ್ಲ: ಯಡಿಯೂರಪ್ಪ

ಮೈಸೂರು: ನಾವು ಸೋತರೆ ಸರ್ಕಾರ ಉಳಿಯುತ್ತಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​​​ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಚಾಮುಂಡೇಶ್ವರಿ ಸೋಲನ್ನ ಸಿದ್ದರಾಮಯ್ಯ ಜೀವನದಲ್ಲಿ ಮರೆಯಲ್ಲ. ದೇವೇಗೌಡರ ಹಾಗೂ ಕುಮಾರಸ್ವಾಮಿ ರಾಜಕೀಯ ಆಟವನ್ನ‌ ಸಿದ್ದರಾಮಯ್ಯ ನೋಡಿದ್ದಾರೆ‌. 20 ಜನ ಕಾಂಗ್ರೆಸ್ ಎಂಎಲ್‌ಎಗಳು ಅಸಮಾಧಾನಗೊಂಡು ಬಹಿರಂಗ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿ ಸಿದ್ದರಾಮಯ್ಯ ಹೀಗೆ ಹೇಳರಬಹುದು‌. ನಾವು 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಚುನಾವಣೆ ನಂತರ ಮೈತ್ರಿ ಪಕ್ಷಗಳ ಹೊಡೆದಾಟ ಜಾಸ್ತಿ ಆಗುತ್ತೆ, ಸರ್ಕಾರ ಬೀಳುತ್ತೆ ಎಂದರು.

ವೀರಶೈವ ಸಮಾಜದಲ್ಲಿ ಗೊಂದಲವನ್ನ ಉಂಟು ಮಾಡುವ ಪಿತೂರಿ ನಡೆಯುತ್ತಿದೆ. ಯಾವುದಾದರೂ ಕಾರಣಕ್ಕೆ ಪ್ರತಾಪ್‌ ಸಿಂಹಗೆ ಹಿನ್ನಡೆಯಾದ್ರೆ ಅದು ಯಡಿಯೂರಪ್ಪರ ಸೋಲು. ಪ್ರತಾಪ್‌ ಸಿಂಹ ಗೆಲುವಿನ ಮೇಲೆ ಯಡಿಯೂರಪ್ಪ ಭವಿಷ್ಯ ನಿರ್ಮಾಣ ಆಗುತ್ತೆ. ಚುನಾವಣಾ ನಂತರ ಮೈತ್ರಿ ಸರ್ಕಾರ ಮುಳುಗಲಿದೆ. ಈಗಾಗಲೇ ರಾಜ್ಯ ಸರ್ಕಾರದ 20 ಶಾಸಕರು ಕುಮಾರಸ್ವಾಮಿ ಆಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಶಿವಮೊಗ್ಗಕ್ಕೆ ಪ್ರಚಾರಕ್ಕೆ ನಾನು ಹೋಗಿಲ್ಲ, ಬೇರೆ ಪಕ್ಷದ ನಾಯಕರು ಅಲ್ಲೇ ಇದ್ದಾರೆ. ಆದ್ರೆ, ನಾನು ಬೇರೆಡೆ ಪ್ರಚಾರಕ್ಕಾಗಿ ನಾನು ಹೋಗಲು ಸಾಧ್ಯವಾಗಿಲ್ಲ. ಆದ್ರೂ ರಾಘವೇಂದ್ರ ಗೆಲ್ಲಲಿದ್ದಾರೆ ಎನ್ನುವ ಅದಮ್ಯ ವಿಶ್ವಾಸವಿದೆ ಎಂದರು.

ಶ್ರೀನಿವಾಸ್ ಪ್ರಸಾದ್ ಸ್ಪರ್ಧೆಗೆ ನಾನೇ ಒತ್ತಾಯ ಮಾಡಿದ್ದು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶ್ರೀನಿವಾಸ್ ಪ್ರಸಾದ್​​​ರನ್ನ ನಾನು ಒತ್ತಾಯ ಮಾಡಿ ಸ್ಪರ್ದಿಸುವಂತೆ ಹೇಳಿದ್ದೆ. ನಮ್ಮ ಸಮಾಜ ಶ್ರೀನಿವಾಸ್ ಪ್ರಸಾದ್ ಅವರನ್ನ ಬೆಂಬಲಿಸಬೇಕು. ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಡಕು ಉಂಟು ಮಾಡಲು ಪಿತೂರಿ ನಡೆಯುತ್ತಿದೆ. ಇದರಿಂದ ಎಚ್ಚೆತ್ತುಕೊಂಡು ಎಲ್ಲರೂ ಒಗ್ಗೂಡಿ ನಡೆಯಬೇಕು. ಮೈಸೂರು-ಕೊಡಗು ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಚಾಮರಾಜನಗರ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆಲುವಿಗಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv