ಕುಟುಂಬ ರಾಜಕಾರಣ ಅಂದ್ರೆ ದೇವೇಗೌಡ ಆ್ಯಂಡ್​ ಕಂಪನಿ: ಬಿಎಸ್​​ವೈ

ಹಾಸನ: ನಮ್ಮ ಎದುರಾಳಿಗಳನ್ನು ಹಗುರವಾಗಿ ಕಾಣಬೇಡಿ. ಕೊನೆಯ ದಿವಸ ಹಣದ ಹೊಳೆ ಹರಿಸಿ ನಿಮ್ಮನ್ನು ಮರುಳು ಮಾಡಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​​​.ಯಡಿಯೂರಪ್ಪ ಹೇಳಿದ್ದಾರೆ. ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಯಡಿಯೂರಪ್ಪ, ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ. ಮಾಧ್ಯಮದವರ ಮುಖಾಂತರ ನಾನು ಒಂದು ಮಾತನ್ನ ಹೇಳ್ತೇನೆ. ಏಪ್ರಿಲ್ 18ರಂದು ಲಕೋಟಿ ಮೇಲೆ ಬರೆದುಕೊಡ್ತೇನೆ ಹಾಸನ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ಲುತ್ತೆ. ಜಾತಿ ವಿಷ ಬೀಜ ಬಿತ್ತುವ ಸಂಸ್ಕೃತಿ ನಮ್ಮದಲ್ಲ, ಅದು ಕುಟುಂಬ ರಾಜಕಾರಣದವರಿಗೆ ಮಾತ್ರ ಸಾಧ್ಯ. ನಮ್ಮದು ಜಾತ್ಯಾತೀತ ಪಕ್ಷ. ಬಿಜೆಪಿ ಸರ್ಕಾರದಲ್ಲಿ ಅಬ್ದುಲ್ ಕಲಾಂ ಅವರನ್ನ ನಾವು ರಾಷ್ಟ್ರಪತಿ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು. ಕುಟುಂಬ ರಾಜಕಾರಣ ಅನ್ನೋದು ದೇವೇಗೌಡ ಆ್ಯಂಡ್​ ಕಂಪೆನಿ ಇದ್ದ ಹಾಗೇ ಎಂದು ಯಡಿಯೂರಪ್ಪ ಟೀಕಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv