ಸೈನಿಕರ ಹೆಸರಲ್ಲಿ ಬಿಜೆಪಿ ಮತ ಕೇಳೋದು ಸರಿಯಲ್ಲ: ಕೃಷ್ಣ ಬೈರೇಗೌಡ

ಬೆಂಗಳೂರು: ಸೈನಿಕರ ಹೆಸರಲ್ಲಿ ಬಿಜೆಪಿ ಮತ ಕೇಳೋದು ಸರಿಯಲ್ಲ. ಮಿಲಿಟರಿಯನ್ನ ಚುನಾವಣಾ ಅಸ್ತ್ರವಾಗಿ ಬಳಸಬಾರದು ಎಂದು ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ನಗರದಲ್ಲಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು,  ಸೈನಿಕರ ತ್ಯಾಗ, ಬಲಿದಾನವನ್ನ ಬಿಜೆಪಿ ಬಳಕೆ ಮಾಡ್ತಿರೋದು ದುರ್ದೈವ. ಬಲಿದಾನವಾಗಿರೋದು ಸೈನಿಕರೇ ಹೊರತು ಬಿಜೆಪಿ ಅವರಲ್ಲ. ಮೋದಿ ಮತ್ತೆ ಪ್ರಧಾನಿಯಾದ್ರೆ ಒಳ್ಳೆಯದು ಅಂತ ಇಮ್ರಾನ್ ಖಾನ್ ಹೇಳ್ತಾರೆ. ಪಾಕಿಸ್ತಾನದ ಪ್ರಧಾನಿ, ಮೋದಿಯನ್ನ ಬೆಂಬಲಿಸ್ತಾರೆ ಅಂದ್ರೆ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv