ಪತ್ನಿ ಜೊತೆ ಬಂದು ಮತ ಚಲಾಯಿಸಿದ ಅಮಿತ್ ಶಾ

ಅಹಮದಾಬಾದ್​: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನರನ್ಪುರ ಸಬ್ ಜೋನಲ್ ಆಫೀಸ್​ನಲ್ಲಿ ಇಂದು ಮತದಾನ ಮಾಡಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ರಣಿಪ್​ನಲ್ಲಿ ವೋಟ್ ಹಾಕಲು ಆಗಮಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಅಮಿತ್​ ಶಾ ಸಾಥ್ ನೀಡಿದರು. ಮೋದಿ ವೋಟ್ ಮಾಡಿದ ಬಳಿಕ ಅಮಿತ್ ಶಾ ನೇರವಾಗಿ ತಮ್ಮ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಅಮಿತ್ ಶಾ ಜೊತೆಗೆ ಅವರ ಪತ್ನಿ ಸೋನಲ್ ಶಾ ಕೂಡ ವೋಟ್ ಮಾಡಿದರು. ಈ ಬಾರಿ ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದಾರೆ.