‘ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸ್ಪೀಕರ್ ನೇತೃತ್ವದಲ್ಲೇ ತನಿಖೆ ಆಗಲಿ’

ಬೆಂಗಳೂರು: ‘ಆಪರೇಷನ್​ ಕಮಲ’ದ ಆಡಿಯೋ ತನಿಖೆ ಸಿಎಂ ನೇತೃತ್ವದಲ್ಲಿ ಆಗೋದು ಬೇಡ’ ಅಂತಾ ಸದನದಲ್ಲಿ ಬಿಜೆಪಿ ಆಗ್ರಹಿಸಿದೆ. ಇಂದು ವಿಧಾನಸಭಾ ಕಲಾಪದಲ್ಲಿ ಮೊನ್ನೆ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದ ಬಗ್ಗೆ ತನಿಖೆ ನಡೆಯಿತು. ಸುದೀರ್ಘ ಚರ್ಚೆ ಬಳಿಕ ಸ್ಪೀಕರ್ ರಮೇಶ್ ಕುಮಾರ್, ಆಡಿಯೋ ತನಿಖೆಯನ್ನ ಸಿಎಂ ನೇತೃತ್ವದಲ್ಲಿ ಸ್ಪೆಷಲ್​ ತಂಡ ರಚಿಸುವಂತೆ ಸೂಚನೆ ನೀಡಿದರು.

ಇದಕ್ಕೆ ಸಿಎಂ ಕುಮಾರಸ್ವಾಮಿ ಕೂಡ ತಾವು ಹೇಳಿದಂತೆ 15 ದಿನದೊಳಗೆ ಸಂಪೂರ್ಣ ತನಿಖೆ ನಡೆಸಿ ಮಾಹಿತಿ ನೀಡುತ್ತೇನೆ ಅಂತಾ ಹೇಳಿದರು. ಆಗ ಬಿಜೆಪಿ ಶಾಸಕ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿ, ಸರ್ಕಾರ ನಡೆಸುವ ತನಿಖೆಯಲ್ಲಿ ನಮಗೆ ನಂಬಿಕೆಯಿಲ್ಲ. ನೀವೇ ತಂಡ ರಚಿಸಿ ತನಿಖೆ ನಡೆಸಿ. ಈ ಪ್ರಕರಣದಲ್ಲೂ ಅವರ ಹೆಸರೂ ಕೇಳಿ ಬಂದಿದೆ. ಸದನದ ಗೌರವಕ್ಕೆ ನಾವು ತಲೆ ಬಾಗುತ್ತೇವೆ. ಎಲ್ಲಾ ಚರ್ಚೆಯಾಗಿ, ನೋಟಿಸ್​ ಕೊಡಿ ಅಂತಾ ಹೇಳಿದರು.

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’
ಆಗ ಸಿಎಂ ಕುಮಾರಸ್ವಾಮಿ ಮಧ್ಯಪ್ರವೇಶ ಮಾಡಿ, ಮಾನ್ಯ ಸಭಾಧ್ಯಕ್ಷರೇ ಇದು ನಿಮ್ಮ ವಿವೇಚನೆಗೆ ಬಿಟ್ಟದ್ದು ಅಂತಾ ಹೇಳಿದರು. ನಂತ್ರ ಮಧ್ಯ ಪ್ರವೇಶ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿಮ್ಮ ಮೇಲಿನ ಕಾರ್ಮೋಡ ಕ್ಲಿಯರ್​ ಆಗಬೇಕು, ಸತ್ಯಾಸತ್ಯತೆ ಏನು ಅನ್ನೋದು ದೇಶದ ಜನರಿಗೆ ಗೊತ್ತಾಗಬೇಕು. ಯಾರ ಬಗ್ಗೆನೂ ನಾನು ಮಾತನಾಡಿಲ್ಲ. ನಾವೆಲ್ಲರೂ ಸಾರ್ಜನಿಕ ಜೀವನದಲ್ಲಿದ್ದೇವೆ. ಜನ ಇವತ್ತು ನಮ್ಮ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ಅವಕಾಶ ಮಾಡಿಕೊಡಬಾರದು. ಇದಕ್ಕೆ ಒಂದು ಚರಣ ಗೀತೆ ಆಡಬೇಕು. ಎಲ್ಲದಕ್ಕೂ ಒಂದು ಕೊನೆಯಾಗಬೇಕು. ಆಡಿಯೋ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ನಾವು ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಇದು ದಾರಿ ದೀಪವಾಗಬೇಕು. ಆದ್ರೆ ನೀವು ಎಮೋಷನ್ ಆಗಿ ತೀರ್ಮಾನ ಮಾಡಬೇಕು, ಉಪ್ಪುತಿಂದವರು ನೀರು ಕುಡಿಯಲೇ ಬೇಕು ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv