ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ್‌ಗೆ ಬಿಜೆಪಿ ಗಾಳ..?

ತುಮಕೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್​​ ಕಮಲದ ಚರ್ಚೆ ಜೋರಾಗಿದ್ದು, ಈ ಮಧ್ಯೆ ಜೆಡಿಎಸ್ ಶಾಸಕರೊಬ್ಬರಿಗೆ ಬಿಜೆಪಿ ಗಾಳ ಹಾಕಿದೆ ಅಂತ ಹೇಳಲಾಗ್ತಿದೆ. ಶಿರಾ ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಬಿ.ಸತ್ಯನಾರಾಯಣ್‌ಗೆ ಬಿಜೆಪಿ ನಾಯಕರು ಸಚಿವ ಸ್ಥಾನದ ಆಫರ್ ನೀಡಿದ್ದಾರೆ ಎನ್ನಲಾಗ್ತಿದೆ. ಡಿ.ವಿ.ಸದಾನಂದಗೌಡ ಹಾಗೂ ಸಿ.ಪಿ.ಯೋಗೇಶ್ವರ್ ಮೂಲಕ ಬಿ.ಸತ್ಯನಾರಾಯಣ್‌ ಅವರನ್ನ ಸಂಪರ್ಕಿಸಿ ಸಚಿವ ಸ್ಥಾನದ ಆಫರ್​​ ನೀಡಲಾಗಿದೆಯಂತೆ.

ಈ ಹಿಂದೆ  ಸತ್ಯನಾರಾಯಣ್ ಕುಂಚಿಟಿಗ ಕೋಟಾದಡಿ ಸಚಿವ ಸ್ಥಾನ ನೀಡುವಂತೆ  ಕೇಳಿದ್ದರು. ಆದ್ರೆ ಜೆಡಿಎಸ್ ನಾಯಕರು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ‌ ನೀಡಿ ಸಮಾಧಾನಪಡಿಸಿದ್ದರು. ಕೆಎಸ್‌ಆರ್‌ಟಿಸಿಯಲ್ಲೂ ದೇವೇಗೌಡರ ಕುಟುಂಬ ಹಸ್ತಕ್ಷೇಪ ವಹಿಸುತ್ತಿದೆ. ಪ್ರತಿ ವಿಚಾರಕ್ಕೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಸ್ತಕ್ಷೇಪ ವಹಿಸುತ್ತಿದ್ದಾರೆಂದು ಆರೋಪಿಸಲಾಗಿದೆ. ಹಾಗಾಗಿ ನಾಮಕಾವಸ್ತೆ ಅಧ್ಯಕ್ಷ ಸ್ಥಾನ‌ ಬೇಡವೇ ಬೇಡ ಎಂದು ಸತ್ಯನಾರಾಯಣ್ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv