ಸುಳ್ಳು ಭರವಸೆ ನೀಡುವುದರಲ್ಲಿ ಬಿಜೆಪಿ ನಂ.1 -ವಿನಯ್ ಕುಲಕರ್ಣಿ

ಹುಬ್ಬಳ್ಳಿ: ಸುಳ್ಳು ಭರವಸೆ ನೀಡುವುದರಲ್ಲಿ ಬಿಜೆಪಿ ನಂಬರ್​ 1. ಬಿಜೆಪಿ ನಾಯಕರು ಈ ಬಾರಿಯೂ ಸುಳ್ಳಿನ ಕಂತೆಯೊಂದಿಗೆ ಜನರ ಮುಂದೆ ಬರುತ್ತಿದ್ದು, ಮತದಾರರು ಮೋಸ ಹೋಗಬಾರದು ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.

ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಚುನಾವಣೆ ಬಹಿರಂಗ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ರೈತರ ಖಾತೆಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಹಾಕುತ್ತೇನೆಂದು ಹೇಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ರು. ದೇಶಕ್ಕೆ ಅನ್ನ ಹಾಕುವ ರೈತನನ್ನು ಅವಮಾನ ಮಾಡಿರುವ ಪ್ರಧಾನಿ ಮೋದಿ ರೈತರಿಗೆ ಪ್ರತಿದಿನದ ಲೆಕ್ಕದಲ್ಲಿ 17 ರೂಪಾಯಿ ಕೊಡುತ್ತಿರುವುದು ನಾಚಿಕೆಗೇಡು ಎಂದು ತಿಳಿಸಿದರು. ಅನ್ನ ಕೊಡುವ ರೈತ ಎಂದೂ ಭಿಕ್ಷೆ ಬೇಡಲ್ಲಾ ಅನ್ನೋದನ್ನ ಬಿಜೆಪಿ ಯವರು ತಿಳಿದುಕೊಳ್ಳಬೇಕು ಎಂದರು. ಮೂರು ಸಾರಿ ಸಂಸದರಾಗಿರುವ ಜೋಶಿ ಜಿಲ್ಲೆಗೆ ಕೊಟ್ಟ ಅಭಿವೃದ್ದಿ ಕಾಮಗಾರಿಗಳು ನಗಣ್ಯ ಎಂದು ಹೇಳಿದ ವಿನಯ ಕುಲಕರ್ಣಿ ಫಸಲ್​ ಬೀಮಾ ಯೋಜನೆಯಲ್ಲಿ ರೈತರ ಹಣವನ್ನು ಕೊಳ್ಳೇ ಹೊಡೆಯಲಾಗಿದೆ ಎಂದು ಆರೋಪಿಸಿದ್ರು. ಈ ಸಲ ಕಾಂಗ್ರೆಸ್ಸಿಗೆ ಮತ ನೀಡುವಂತೆ ವಿನಯ ಕುಲಕರ್ಣಿ ಮನವಿ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv