‘ವಾಜಪೇಯಿ ಅವರಿಗೆ ಬಿಜೆಪಿ ಗೌರವ ಕೊಟ್ಟಿಲ್ಲ’

ಮಹಾರಾಷ್ಟ್ರ: ಹಿರಿಯ ನಾಯಕ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಬಿಜೆಪಿ ಗೌರವ ಕೊಟ್ಟಿಲ್ಲ. ಅವರನ್ನು ಕಡೆಗಣಿಸಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮಹಾರಾಷ್ಟ್ರದ ಱಲಿಯೊಂದರಲ್ಲಿ ಮಾತನಾಡಿದ ಅವರು, ವಾಜಪೇಯಿಜೀ ನನ್ನ ಪ್ರತಿಸ್ಪರ್ಧಿ. ನಾನು ಅವರ ವಿರುದ್ಧ ಹೋರಾಡಿದ್ದೇನೆ. ಆದ್ರೂ ನಾನು ಅವರನ್ನು ಗೌರವಿಸುತ್ತೇನೆ. ಯಾಕಂದ್ರೆ ಅವರು ದೇಶಕ್ಕಾಗಿ ಹೋರಾಡಿದ್ದಾರೆ. ನಾನು ಒಬ್ಬ ಕಾಂಗ್ರೆಸ್​ನ ಸಿಪಾಯಿ. ಅದರೂ, ಆಸ್ಪತ್ರೆಯಲ್ಲಿದ್ದ ವಾಜಪೇಯಿ ಅವರನ್ನು ಮೊದಲು ನೋಡಲು ನಾನು ಹೋಗಿದ್ದೆ. ಅದು ನನ್ನ ಧರ್ಮ-ಸಂಸ್ಕೃತಿ. ಪ್ರಧಾನಿ ಮೋದಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ, ಇದೇನಾ ಅವರ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಇನ್ನು, ಮೊದಿಯವರ ಗುರು ಯಾರು? ಎಲ್​.ಕೆ ಅಡ್ವಾಣಿ! ನಾನು ಎಷ್ಟೋ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ, ಮೋದಿಯವರು ಅಡ್ವಾಣಿಜೀಗೆ ಗೌರವ ನೀಡಿಲ್ಲ. ಆದ್ರೆ ಕಾಂಗ್ರೆಸ್,​ ಮೋದಿಯವರಿಗಿಂತ ಹೆಚ್ಚು ಅಡ್ವಾಣಿಜೀ ಹಾಗು ವಾಜಪೇಯಿಜೀ ಅವರನ್ನು ಗೌರವಿಸುತ್ತೆ ಎಂದರು. ನನಗೆ ಇಂದು ವಾಜಪೇಯಿಜೀ ಅವರನ್ನು ನೋಡಿದ್ರೆ ಬೇಸರವಾಗುತ್ತಿದೆ ಅಂತಾ ರಾಹುಲ್​ ವಿಷಾದಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv