ಹೋಟೆಲ್​ನ ಗ್ರಾಹಕರಿಗೆ ಬಿಜೆಪಿ ಶಾಸಕರಿಂದ ಅವಾಜ್..!​​

ಯಾದಗಿರಿ: ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿ ಕರೆ ಕೊಟ್ಟಿರುವ ಕರ್ನಾಟಕ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿದಢೆ ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಯಾದಗಿರಿಯಲ್ಲಿ ಬಿಜೆಪಿ ಶಾಸಕರೊಬ್ಬರು ಹೋಟೆಲ್​ಗೆ ಹೋಗಿ ತಿಂಡಿ ತಿನ್ನಲು ಬಂದವರಿಗೆ ಅವಾಜ್​ ಹಾಕಿದ ಘಟನೆ ನಡೆದಿದೆ. ಶಾಸಕ ವೆಂಕಟರೆಡ್ಡಿ ಮುದ್ನಾಳ ಹೊರಗೆ ನಡಿಯಿರಿ, ನಾನು ಶಾಸಕ ನಾನು ಹೇಳಿದ್ದೆ ನಡೆಯಬೇಕು ಎಂದು ಗ್ರಾಹಕರಿಗೆ ಅವಾಜ್​ ಹಾಕಿದ್ದಾರೆ. ಅಲ್ಲದೇ ನಾಲ್ಕು ದಿನದಿಂದ ಹೇಳುತ್ತಿದ್ದೇವೆ, ಕರ್ನಾಟಕ ಬಂದ್​​ ಅಂತಾ ಗೊತ್ತಿಲ್ವಾ ಎಂದು ಗ್ರಾಹಕರನ್ನು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv