ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ತುಂಬಾನೇ ತಾರತಮ್ಯ ಮಾಡ್ತಾರೆ: ರವೀಂದ್ರನಾಥ

ದಾವಣಗೆರೆ: ಸಿಎಮ್ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆ ವಿಚಾರವಾಗಿ ಕುಮಾರಸ್ವಾಮಿಯವರು ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ನಡೆಸಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಅಂತಾ ತಾರತಮ್ಯ ಮಾಡಬಾರದೆಂದು ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ ಸಿಎಂಗೆ ಕಿವಿಮಾತು ತಿಳಿಸಿದ್ದಾರೆ. ಅದೇ ವೇಳೆ ಮಾತನಾಡಿದ ಅವರು, ಪ್ರಾಮಾಣಿಕ ಕೆಲಸ ಮಾಡುವುದನ್ನ ಬಿಟ್ಟು  ರಾಜೀನಾಮೆ ಕೊಡ್ತೀನಿ ಅಂತಾ ಹೇಳಬಾರದು. ಸಿ.ಎಂ ಕುಮಾರಸ್ವಾಮಿಗೆ ಬಿಜೆಪಿ ಕಡೆ ಒಲವು ಇಲ್ಲ. ಅಧಿಕಾರ ಇರುವ ತನಕ ಒಳ್ಳೆಯ ರೀತಿ ಕೆಲಸ ಮಾಡಬೇಕು. ಇನ್ನು ನನಗೆ ಗೊತ್ತಿರುವ ಪ್ರಕಾರ ಕುಮಾರಸ್ವಾಮಿಯವರು ತುಂಬಾನೇ ತಾರತಮ್ಯ ಮಾಡ್ತಾರೆ. ಬೇರೆ ಪಕ್ಷದವರಿಗೆ ಬೇಜವಾಬ್ದಾರಿತನದ ಉತ್ತರ ಕೊಡ್ತಾರೆ. ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.

ಬೇಜವಾಬ್ದಾರಿ ಮುಖ್ಯಮಂತ್ರಿಯನ್ನ ನೋಡಿದ್ದು ಇದೇ ಮೊದಲು
ಬಿಜೆಪಿ ಶಾಸಕರಿರುವ ಕಡೆ ಸಿಎಂ ಕುಮಾರಸ್ವಾಮಿ ಅನುದಾನ ಬಿಡುಗಡೆ ವಿಚಾರವಾಗಿ ಮಾತನಾಡಿದ ರವೀಂದ್ರನಾಥ ಇದುವರೆಗೆ ಎಳ್ಳಷ್ಟೂ ಅನುದಾನ ಕೊಟ್ಟಿಲ್ಲ. ಬಿಜೆಪಿ ಶಾಸಕರಿರುವ ಕಡೆ ಕೇವಲ 10 % ರಷ್ಟು ಅನುದಾನ ಕೊಟ್ಟಿದಾರೆ. ಕೆಲಸ ಮಾಡಲಿಕ್ಕೆ ತಾರತಮ್ಯ ಮಾಡಬಾರದು ಎಂದರು. ಇನ್ನು ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದ್ರೆ ಈ ರೀತಿ ಬೇಜವಾಬ್ದಾರಿ ಕೆಲಸ ಮಾಡುವ ಮುಖ್ಯಮಂತ್ರಿಯನ್ನು ಇದೆ ಮೊದಲು ನೋಡುತ್ತಿದ್ದೇನೆಂದು ದಾವಣಗೆರೆಯಲ್ಲಿ ಶಾಸಕ ಎಸ್. ಎ ರವೀಂದ್ರನಾಥ ಹೇಳಿದ್ದಾರೆ.