ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್​..!

ಬೆಂಗಳೂರು: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸವಾಲ್​ ಹಾಕಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಏಳು ತಿಂಗಳಿನಿಂದ ಬಿಜೆಪಿ ಸರ್ಕಾರವನ್ನ ಅಸ್ಥಿರ ಮಾಡಲು ಹೊರಟಿದೆ ಅಂತಾ ಕುಮಾರಸ್ವಾಮಿ ಹೇಳ್ತಾರೆ. ಆದ್ರೆ 2008ರಲ್ಲಿ ಯಡಿಯೂರಪ್ಪ ಸರ್ಕಾರವನ್ನು ಅಸ್ಥಿರ ಮಾಡಲು ಪ್ರಯತ್ನ ಮಾಡಿದ್ಯಾರು? ಗೋವಾದ ತಾಜ್ ಎಕ್ಸೋಟಿಕ್​ ಹೋಟೆಲ್‌ಗೆ ಬಂದಿದ್ದು ಯಾರು? ನಿಮಗೆ ಯಾರು ಆಗ ತಾಜ್ ಹೋಟೆಲ್‌ಗೆ ಬಾ ಅಂದಿದ್ದು? ಆಗ ಕುಮಾರಸ್ವಾಮಿಗೂ ನನಗೂ ವಾಗ್ವಾದ ಆಯ್ತು. ಬುಲ್ಡೋಟಾ ಕಂಪೆನಿ ಮೂಲಕ ಹಣ ಸಂಗ್ರಹಿಸಿದ್ದು ಯಾಕೆ? ಯಾಕೆ ಹಣ ತಂದ್ರೀ? ಎಷ್ಟು ಹಣ ತಂದಿದ್ರೀ ಗೋವಾಗೆ? ತಿಳಿಸಿ ಅಂತಾ ರೇಣುಕಾಚಾರ್ಯ ಸವಾಲ್ ಹಾಕಿದ್ರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv