ನಿಮ್ಮ ಶಾಸಕ ನಮ್ಮ ಹಾಡು ಕದ್ದಿದ್ದಾರೆ ಎಂದ ಪಾಕ್​..!

ದೆಹಲಿ: ಭಾರತದ ಶಾಸಕರೊಬ್ಬರು ನಮ್ಮ ಹಾಡನ್ನು ಕಾಪಿ ಮಾಡಿ, ಅದನ್ನು ಭಾರತೀಯ ಸೇನೆಗೆ ಸಮರ್ಪಿಸಿದ್ದಾರೆ ಅಂತಾ ಪಾಕ್ ಸೇನೆ ಆರೋಪಿಸಿದೆ. ತೆಲಂಗಾಣದ ಬಿಜೆಪಿ ಶಾಸಕ ಠಾಕೂರ್ ರಾಜಾ ಸಿಂಗ್ ಜಿಂದಾಬಾದ್ ಹಿಂದೂಸ್ಥಾನ್ ಅನ್ನೋ ಹಾಡೊಂದನ್ನು ತಾವೇ ಸ್ವತಃ ಹಾಡಿದ್ದರು. ಅಲ್ಲದೇ ಇದನ್ನು ಅವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿ ಈ ಹಾಡು ಭಾರತೀಯ ಸೇನೆಗೆ ಅರ್ಪಣೆ ಅಂತಾ ಕೂಡ ಬರೆದುಕೊಂಡಿದ್ದರು. ಏಪ್ರಿಲ್ 12ರಂದು ಅವರು ಈ ಪೋಸ್ಟ್ ಮಾಡಿದ್ದು, ರಾಮನವಮಿಯಂದು ಸಂಪೂರ್ಣ ಹಾಡು ರಿಲೀಸ್ ಆಗಲಿದೆ ಅಂತಾ ಹೇಳಿದ್ದರು. ಆದ್ರೆ, ಇದೀಗ ಪಾಕ್ ಆರ್ಮಿ ನಮ್ಮ ದೇಶದ ಹಾಡನ್ನು ರಾಜಾ ಸಿಂಗ್ ನಕಲು ಮಾಡಿದ್ದಾರೆ ಅಂತಾ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್, ಜಿಂದಾಬಾದ್ ಪಾಕಿಸ್ತಾನ ಅಂತಿರೋ ಹಾಡನ್ನು ಬದಲಿಸಿ ಜಿಂದಾಬಾದ್ ಹಿಂದೂಸ್ಥಾನ್ ಅಂತಾ ಹಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಮಾರ್ಚ್ 23ರ ಪಾಕಿಸ್ತಾನ ದಿನಾಚರಣೆಯಂದು ಈ ಹಾಡನ್ನು ರಿಲೀಸ್ ಮಾಡಿದ್ದಾಗಿ ಪಾಕ್ ಸೇನೆ ಹೇಳಿಕೊಂಡಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv