ಪಿಎಸ್ಐಗೆ ಆವಾಜ್ ಹಾಕಿದ್ರಾ ಬಿಜೆಪಿ ಶಾಸಕ..?

ಕಲಬುರ್ಗಿ: ಬಿಜೆಪಿ ಶಾಸಕ ಹಾಗೂ ಬೆಂಬಲಿಗರು ನರೋಣಾ ಠಾಣೆ ಪಿಎಸ್ಐ ಗಜಾನನ್ ನಾಯಕ್​ಗೆ ಆವಾಜ್ ಹಾಕಿರುವ ವಿಡಿಯೋ‌ ಒಂದು ವೈರಲ್ ಆಗಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಹಾಗೂ ಬಿಜೆಪಿ ಮುಖಂಡ ಶರಣು ಸಲಗಾರ್ ಇಬ್ಬರೂ ಪಿಎಸ್​ಐ ಗಜಾನನ್ ನಾಯಕ್​ಗೆ ಆವಾಜ್​ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಫಸ್ಟ್ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿರುವ ಪಿಎಸ್ಐ ಗಜಾನನ್ ನಾಯಕ್, ಶಾಸಕರು ನನಗೆ ಆವಾಜ್ ಹಾಕಿಲ್ಲ. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಅಂತಾ ಹೇಳಿದ್ದಾರೆ. ನರೋಣಾ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿತ್ತು. ಈ ವೇಳೆ ಶಾಸಕ ಬಸವರಾಜ್ ಮತ್ತಿಮೂಡ್​ಗೆ ಯಾರೋ ಮಿಸ್ ಗೈಡ್ ಮಾಡಿದ್ದಾರೆ. ಆಗ ಶಾಸಕರು ನರೋಣಾ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಅವರ ಜೊತೆ ಬಂದಿದ್ದ ಶರಣು ಸಲಗರ್ ಸ್ವಲ್ಪ ಸಿರಿಯಸ್ ಆಗಿ‌ ಮಾತನಾಡಿದ್ದಾರೆ. ಆ ವೇಳೆ ಯಾರೋ ವಿಡಿಯೋ ಮಾಡಿ ಹರಿದು ಬಿಟ್ಟಿದ್ದಾರೆ. ಶಾಸಕರಾಗಲಿ, ಬೆಂಬಲಿಗರಾಗಲಿ ನನಗೆ ಆವಾಜ್ ಹಾಕಿಲ್ಲ ಅಂತಾ ಪಿಎಸ್ಐ ಗಜಾನನ್ ನಾಯಕ್ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv