ಹನಿಮೂನ್‌ ಮುಗಿಯೋ ಮುಂಚೇನೇ..! ಸಿ.ಟಿ. ರವಿ ಹೇಳಿದ್ದೇನು?

ಹಾಸನ: ಕೇವಲ ಬಿಜೆಪಿಯನ್ನ ಅಧಿಕಾರದಿಂದ ದೂರವಿಡೋ ಷಡ್ಯಂತ್ರದ ಭಾಗವಾಗಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿವೆ. ಹನಿಮೂನ್‌ ಸಮಯ ಮುಗಿಯೋ ಮುಂಚೇನೆ ಅಸಹನೆಯ ಬೀಜ‌ ಮೊಳಕೆಯೊಡೆಯುತ್ತಿದೆ ಅಂತ ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ರೈತರ ಎಲ್ಲ ರೀತಿಯ ಸಾಲ ಮನ್ನಾ ಘೋಷಣೆ ಮಾಡಿದ್ರು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡ್ತಿದ್ದಾರೆ ಅಂತ  ಟೀಕಿಸಿದ್ದಾರೆ. ಸಬೂಬು ಹೇಳೋದು ಬಿಟ್ಟು ಬೇಷರತ್ತಾಗಿ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಳೆಯ ಆರ್ಭಟಕ್ಕೆ ದಕ್ಷಿಣ ಕನ್ನಡದಲ್ಲಿ ಭಾರೀ ಅನಾಹುತವಾಗಿದೆ. ಆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿ ಅಂತಾ ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv