‘ಸಿಎಂ ಕುಮಾರಸ್ವಾಮಿಗೆ.. ಯಾವಾಗಲೂ ಸಿಟ್ಟು ಮಾಡಿಕೊಳ್ಳುವುದೇ ರೂಢಿ’

ದಾವಣಗೆರೆ: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಯಾವಾಗಲೂ ಸಿಟ್ಟು ಮಾಡಿಕೊಳ್ಳುವುದೇ ರೂಢಿ, ಅವರ ತಪ್ಪುಗಳ ಬಗ್ಗೆ ಹೇಳಿದರೆ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ. ರವಿ ಅವರು ರೈತರ ಮೇಲೆ, ಸಂಸದರ ಮೇಲೆ ಹೀಗೆ ಪ್ರತಿಯೊಬ್ಬರ ಮೇಲೆಯೂ ಸಿಎಂ ಕುಮಾರಸ್ವಾಮಿ ಸಿಟ್ಟಾಗುತ್ತಿದ್ದಾರೆ. ರೈತರು ಏನಾದರು ಕೇಳಿದರೆ ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದಿರಿ ಅಂತಾರೆ. ಇವರೇ ಮಲಗಿದ್ದ ವಿಷಯ ಹೊರತೆಗೆದರೇ ರಾಜ್ಯದಲ್ಲಿ ಯಾವ ಗೌರವವೂ ಉಳಿಯುವುದಿಲ್ಲ. ಸಿಎಂ ಕುಮಾರಸ್ವಾಮಿ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಾಗದೇ ಇರಲಿ ಬಿಡಿ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದು ಅವರಿಗೆ ಬಿಟ್ಟಿದ್ದು. ಅವರು ತುಂಬಾ ಬುದ್ಧಿವಂತವರು. ಅವರು ಎಲ್ಲಿಗೇ ಹೋದರು ಅದರ ಹಿಂದೆ ಏನಾದರೂ ಅರ್ಥ ಇರುತ್ತೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv