‘ಲಾರಿ ಅಡ್ಡ ಬಂತು ಹಾಗಾಗಿ ನನಗೆ ಏನೂ ಮಾಡೋಕೆ ಆಗಿಲ್ಲ ಅಂತಾ ಡ್ರೈವರ್ ಹೇಳಿದ’

ಬೆಂಗಳೂರು: ನಾನು ಡ್ರೈವರ್ ಆಕಾಶ್ ಬಳಿ 100 ಮೇಲೆ ಹೋಗಬೇಡ ಅಂತ ಹೇಳಿದ್ದೆ. ನಾನು ಮಲಗಿದ್ದೆ, ಏನಾಗಿದೆ ಅಂತಾ ನನಗೂ ಗೊತ್ತಾಗಲಿಲ್ಲ. ಲಾರಿ ಅಡ್ಡ ಬಂತು ಹಾಗಾಗಿ ನನಗೆ ಏನೂ ಮಾಡೋಕೆ ಆಗಿಲ್ಲ ಅಂತಾ ನಮ್ಮ ಡ್ರೈವರ್ ಹೇಳಿದ್ದಾನೆ ಎಂದು ಶಾಸಕ ಸಿ.ಟಿ. ರವಿ ತುಮಕೂರಿನಲ್ಲ ನಡೆದ ತಮ್ಮ ಕಾರು ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ. ರವಿ, ಘಟನೆ ನಡೆದ ಸ್ಥಳದಲ್ಲಿ ನಾನೇ ಪೊಲೀಸರಿಗೆ ಫೋನ್ ಮಾಡಿದ್ದೇನೆ. ಉದ್ದೇಶಪೂರ್ವಕವಾಗಿ ಈ ಘಟನೆ ಯಾವುದೂ ಆಗಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ. ನನಗೂ ಎದೆ ನೋವು ಹಾಗೂ ಸಣ್ಣ ಪುಟ್ಟ ತರಚಿದ ಗಾಯವಾಗಿದೆ. ನನಗೆ ಕುಡಿಯುವ ಅಭ್ಯಾಸ ಇಲ್ಲ, ಅದು ಎಲ್ಲರಿಗೂ ಗೊತ್ತು. ನಾನು ಯಾವತ್ತೂ ಕಾರನ್ನ ಡ್ರೈವ್ ಮಾಡಲ್ಲ. ನನ್ನ ಬಳಿ ಫೋನ್ ಕೂಡ ಇರಲಿಲ್ಲ, ಅದು ಕಾರಿನಲ್ಲಿ ಬಿದ್ದಿತ್ತು. ನಾನು ದಾರಿಹೋಕರಲ್ಲಿ ಮೊಬೈಲ್ ಕೇಳಿ ಫೋನ್ ಮಾಡಿದ್ದೇನೆ. ನಾನು ಬದುಕಿರೋದು ಕೂಡ ದೊಡ್ಡ ವಿಷಯ. ನನ್ನ ಕಾರು ನೋಡಿದ್ರೆ ಏನಾಗಿತ್ತು ಅನ್ನೋದು ಗೊತ್ತಾಗ್ತಿತ್ತು. ನನ್ನ ಕಾರು ಪೊಲೀಸ್ ವಶದಲ್ಲಿದೆ. ಡ್ರೈವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ತನಿಖೆಗೆ ನಾವೆಲ್ಲ ಸಹಕಾರ ನೀಡುತ್ತೇವೆ. ನಾನು ಟೋಪಿ ಹಾಕೊಂಡು ಮಲಗಿದ್ದೆ. ಘಟನೆ ಬಳಿಕ ಗಾಬರಿಯಾಗಿದ್ದೆ. ಡೈರೆಕ್ಷನ್​​ ನೀಡಿದ ಬಳಿಕ ನಾನು ಮಲಗಿದ್ದೆ. ಕಾರಿನಲ್ಲಿದ್ದ ಎಲ್ಲ ಏರ್ ಬ್ಯಾಗ್​​ಗಳು ಓಪನ್ ಆಗಿದ್ದವು. ಮಾನವೀಯ ಪರಿಸ್ಥಿತಿಯಲ್ಲಿ ನಾನು ಅವರ ಕುಟುಂಬಕ್ಕೆ ಸಹಕಾರ ನೀಡುತ್ತೇನೆ. ನನ್ನ ಡ್ರೈವರ್ ಫ್ಯೂರ್ ವೆಜಿಟೇರಿಯನ್ ಕುಡಿಯೋ ಅಭ್ಯಾಸ ಇಲ್ಲ. ನಾನೇ ಕುಡಿಯಲ್ಲ ಅಂದ ಮೇಲೆ ನನ್ನ ಡ್ರೈವರ್ ಕುಡೀತಾನಾ? ನನಗೆ ಮೂರು ಜನ ಡ್ರೈವರ್ಸ್ ಇದ್ದಾರೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv