“ಅಜೇಯ ಭಾರತ, ಅಟಲ್ ಭಾಜಪ” ಲೋಕಸಭಾ ಚುನಾವಣೆ ಘೋಷವಾಕ್ಯ

ಉತ್ತರ ಕನ್ನಡ: ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ವಿಶೇಷ ಸಭೆ ಶಿರಸಿಯ ಎಪಿಎಂಸಿ ಯ ರೈತ ಭವನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಲೋಕಸಭಾ ಚುನಾವಣೆಯ ಒಳಗೆ 6 ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ರು. ಸ್ವಚ್ಛತಾ ಕಾರ್ಯಕ್ರಮ, ಅಟಲ್ ನೆನಪಿಗಾಗಿ ಕಾವ್ಯಾಂಜಲಿ ಕಾರ್ಯಕ್ರಮ ನಡೆಸುವುದರ ಜೊತೆಗೆ  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 150 ಕಿಮೀ ನಷ್ಟು ಪಾದಯಾತ್ರೆ ಮಾಡುತ್ತಾ  150 ಕ್ಕೂ ಹೆಚ್ಚು ಕಾರ್ಯಕರ್ತರು ಸಂದರ್ಶಿಸುತ್ತಾರೆ ಎಂದು ತಿಳಿಸಿದ್ರು. ಅಲ್ಲದೇ, ಅಗಸ್ಟ್.31ರಿಂದ 1 ವರ್ಷ ಏಕತಾ ಓಟ ಹಾಗೂ ಸರ್ಜಿಕಲ್ ಸ್ಟ್ರೈಕ್ ನೆನಪಿಗಾಗಿ ಶೌರ್ಯತಾ ದಿವಸ್ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಿದ್ದು, ಬೂತ್ ಮಟ್ಟದಲ್ಲಿ 23 ಅಂಶಗಳ ಕಾರ್ಯಕ್ರಮ ನಡೆಸುತ್ತೇವೆ ಎಂದು ಅವರು ತಿಳಿಸಿದ್ರು. ಇದರೊಂದಿಗೆ  “ಅಜೇಯ ಭಾರತ, ಅಟಲ್ ಭಾಜಪ” ಮುಂದಿನ ಲೋಕಸಭಾ ಚುನಾವಣೆಯ ಬಿಜೆಪಿಯ ಘೋಷವಾಕ್ಯವಾಗಿದೆ ಅಂತ ಹೇಳಿದ್ರು.

ವಿಧಾನಪರಿಷತ್ತಿನಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವುದು ಬಿಜೆಪಿ ಸರ್ಕಾರ ಬೀಳಿಸೊಲ್ಲ ಅನ್ನೋದಕ್ಕೆ ಸಾಕ್ಷಿ. ಲೋಕಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನ ಹೈಕಮಾಂಡ್ ನಿರ್ಧರಿಸುತ್ತದೆ. ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಬೇಡಿ. ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳಲ್ಲಿ ನಾವು ಸ್ವಂತ ಬಲದಿಂದ ಅಧಿಕಾರ ಹಿಡಿಯುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಮಾತನಾಡಿ, ಮಾರಿಕಾಂಬಾ ದೇವಾಲಯದ ಸಮೀಪ 10 ಎಕರೆ ಜಾಗ ಖರೀದಿಯಾಗಿದ್ದು, ಸದ್ಯದಲ್ಲೇ ನೂತನ ಜಿಲ್ಲಾ ಕಾರ್ಯಾಲಯ ಕಾಮಗಾರಿ ಪ್ರಾರಂಭವಾಗಲಿದೆ. ಈ ಸಲದ ಚುನಾವಣೆಯಲ್ಲೂ ನಾವು ವಿಶೇಷ ಗೆಲುವನ್ನು ಪಡೆಯಬೇಕಾಗಿದೆ. ಮಾಧ್ಯಮದ ಮುಂದೆ ‘ನಾನು ಆಕಾಂಕ್ಷಿ’ ಎಂದು ಹೇಳಬೇಡಿ. ಪಕ್ಷದ ಸಂಘಟನೆಯನ್ನು ಸರಿಯಾಗಿ ಮಾಡಿ. ಸಕಾಲದಲ್ಲಿ ಸಭೆಗೆ ಹಾಜರಾಗುವುದನ್ನು ರೂಢಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

 ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv