ಇವರು ಬಿಜೆಪಿ ಸೇರುತ್ತಲೇ, ಬಿಜೆಪಿಯಲ್ಲಿ ಟ್ರೆಂಡ್​ ಆಯ್ತಾ ಟ್ರೆಂಡಿ ಹೇರ್​ಸ್ಟೈಲ್​

ದೆಹಲಿ: ಇತ್ತಿಚೆಗಷ್ಟೆ ಪ್ರಖ್ಯಾತ ಹೇರ್​ ಸ್ಟೈಲ್​ ಸ್ಪೆಷಲಿಸ್ಟ್​ ಜಾವೇದ್​ ಹಬೀಬ್​ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ರು. ಇದರ ಬೆನ್ನಲ್ಲೇ ಸೋಶಿಯಲ್​ ಮೀಡಿಯಾಲ್ಲಿ ಬಿಜೆಪಿ ನಾಯಕರಿಗೆ ಟ್ರೆಂಡಿ ಹೇರ್​ಸ್ಟೈಲ್​ನ ಲುಕ್​ ಕೊಟ್ಟು ಎಡಿಟ್ ಮಾಡಿದ ಫೋಟೋಗಳನ್ನು ಹರಿಬಿಡಲಾಗ್ತಿದೆ. ಜಾವೇದ್​ ದೇಶದ ನೂರು ನಗರಗಳಲ್ಲಿ 800 ಹೇರ್​ಸ್ಟೈಲ್​ನ ಶಾಪ್​ಗಳನ್ನ ಹೊಂದಿರುವ ಪ್ರಸಿದ್ಧ ಹೇರ್​ಸ್ಟೈಲ್​ ಸ್ಪೆಷಲಿಸ್ಟ್​ ಎನಿಸಿದ್ದಾರೆ. ಅವರು ಬಿಜೆಪಿಗೆ ಸೇರ್ಪೆಡೆಗೊಂಡ ಬೆನ್ನಲ್ಲೆ ಫೋಟೋ ಶಾಪ್​ನ ಪ್ರವೀಣರೆಲ್ಲಾ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ರವರೆಗೂ ಪ್ರತಿಯೊಬ್ಬರ ಹೇರ್​ಸ್ಟೈಲ್​ಗಳನ್ನು ಬದಲಾಯಿಸಿ ಟ್ರೋಲ್​ ಮಾಡ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv